ಬೆಂಗಳೂರು : ಭಾನುವಾರ ಪಿತೃಪಕ್ಷ ಇರೋದ್ರಿಂದ ಶನಿವಾರವೇ ಜನೋತ್ಸವ ಕಾರ್ಯಕ್ರಮ ನಡೆಸುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ ಭಾನುವಾರ ರಜೆ ಅಂತಾ ಅಧ್ಯಕ್ಷರು ಡೇಟ್ ಫಿಕ್ಸ್ ಮಾಡಿದ್ರು, ಪಿತೃಪಕ್ಷ ಅಶುಭ ದಿನ ಅಂತಾ ಒಂದು ದಿನ ಮೊದಲೇ ಮಾಡುತ್ತಿದ್ಧೇವೆ. ನಮ್ಮ ಎಲ್ಲಾ ಸಚಿವರೂ ತಯಾರಿ ಮಾಡಿ ಕೊಂಡಿದ್ದಾರೆ, ಮೂರು ವರ್ಷದ ಸಾಧನೆ ರಿಪೋರ್ಟ್ ಕಾರ್ಡ್ ಕೊಡ್ತೇವೆ. ಜನೋತ್ಸವ ಅನ್ನೋ ಹಬ್ಬದ ವಾತಾವರಣ ವಾಗಿದೆ. ಅತಿವೃಷ್ಟಿ ಹಿನ್ನೆಲೆಯಲ್ಲಿ ಜನ ಸ್ಪಂದನ ಅಂತಾ ಹೆಸರಿಟ್ಟಿದ್ದೇವೆ. ಕಾರ್ಯಕ್ರಮದ ಎಲ್ಲಾ ಸಿದ್ಧತೆ ಆಗುತ್ತಿದೆ ಎಂದು ಹೇಳಿದ್ಧಾರೆ.