ಬಳ್ಳಾರಿ: ವೈಯಕ್ತಿಕತೆ ಮತ್ತು ಸಾಮೂಹಿಕ ಅಸ್ಮಿತೆ ನಮ್ಮ ಮೂಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ನಗರದ ಹೊರ ವಲಯದ ಬಿಐಟಿಎಂ ಕಾಲೇಜು ಸಭಾಂಗಣದಲ್ಲಿ ಅರಿವು ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ವಿಶ್ವಕವಿ ಸಮ್ಮೇಳನದ ಉದ್ಘಾಟನೆ ವೇಳೆ ಬೆಂಗಳೂರಿನಿಂದ ಆನ್‌ಲೈನ್‌ನಲ್ಲಿಯೇ ಸಂದೇಶ ನೀಡಿದ ಅವರು ಸಮ್ಮೇಳನದ ಯಶಸ್ವಿಗೆ ಹಾರೈಸಿದರು. ಪ್ರತಿ ಭಾಷೆಯ ಸಾಹಿತ್ಯದ ಬೆಳವಣಿಗೆ ಮತ್ತೊಂದು ಭಾಷೆಯ ಬೆಳವಣಿಗೆಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ತನ್ನದೇ ಕೊಡುಗೆ ನೀಡುತ್ತದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಅತ್ಯಂತ ಅರ್ಥಪೂರ್ಣ ಎಂದರು. ನಮ್ಮ ನಾಡಿನಲ್ಲಿ 12ನೇ ಶತಮಾನದಲ್ಲಿ ಬಸವಾದಿ ವಚನಕಾರರ ಕಾಲದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಾಹಿತ್ಯ ಪ್ರಪಂಚಕ್ಕೆ ಪರಿಚಯಿಸಿದರು ಎಂದು ಅವರು ಬಣ್ಣಿಸಿದರು.