ಕೌಲಲಾಂಪುರ/ಮಂಗಳೂರು: ಮಲೇಷ್ಯಾ ಕೌಲಲಾಂಪುರದ ಜುರಾ ಸ್ಟೇಡಿಯಂನಲ್ಲಿ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ಮಹಿಳಾ (ಕಿರಿಯ) ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಮಿತಾ ಅಲೆವೂರಾಯ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಕೋಚ್ ಗುರುರಾಜ್ ಇಟಗಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಕದ್ರಿ ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ಕೆ.ಎಸ್. ಅವರ ಪುತ್ರಿ. ಸಂಹಿತಾ ಅವರು 2022ರಲ್ಲಿ ನೇಪಾಳದಲ್ಲಿ ನಡೆದ ವಿಶ್ವಮಟ್ಟದ ಟೇಕ್ವಾಂಡೋ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು.