ವಿಶ್ವಾಸಮತ ಮಂಡಿಸಿದ ಕೇಜ್ರಿವಾಲ್

ಕೇಜ್ರಿವಾಲ್
Advertisement

ನವದೆಹಲಿ: ಎಎಪಿ ಶಾಸಕರನ್ನು ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ಆರೋಪ ಮಾಡಿ ಬೆನ್ನಹಿಂದೆಯೇ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ವಿಧಾನಸಭೆಯಲ್ಲಿ ವಿಶಾಸಮತ ಮಂಡಿಸಿದ್ದಾರೆ.
ಅಬ್ಕಾರಿ ನೀತಿ ರೂಪಿಸುವಲ್ಲಿ ಅಕ್ರಮ ನಡೆದಿದೆ. ಮದ್ಯದ ಉದ್ಯಮಿಗಳಿಂದ ಕಿಕ್ ಬ್ಯಾಕ್ ಪಡೆಯಲಾಗಿದೆ ಎನ್ನುವ ಆರೋಪದ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅವರ ಮೇಲೆ ಸಿಬಿಐ ದಾಳಿ ನಡೆಸಿತ್ತು. ಸಿಸೋದಿಯಾ ಸೇರಿದಂತೆ ೧೫ ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಅದರ ಬೆನ್ನ ಹಿಂದೆಯೇ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿಕೊಂಡಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಜ್ರೀವಾಲ್ ವಿಶಾಸ ಮತ ಸಾಬೀತಿಗೆ ಮುಂದಾದ್ದಾರೆ.
ನಿರ್ಣಯವನ್ನು ಮಂಡಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಮಣಿಪುರ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ ಹಾಗೂ ಮಹಾರಾಷ್ಟ್ರಗಳಲ್ಲಿ ಬಿಜೆಪಿ ನಾಯಕರ ಆಪರೇಷನ್ ಕಮಲ ತಂತ್ರ ಯಶಸ್ವಿಯಾಗಿರಬಹುದು. ಆದರೆ ದೆಹಲಿಯಲ್ಲಿ ಎಎಪಿ ಶಾಸಕರು ಪಕ್ಷಕ್ಕೆ ನಿಷ್ಠರಾಗಿರುವುದರಿಂದ ಅವರನ್ನು ಓಲೈಸಿಕೊಳ್ಳಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ. ಬಿಜೆಪಿಗೆ ತಾಕತ್ತಿರೆ ಎಎಪಿಯ ಓರ್ವ ಶಾಸಕನನ್ನಾದರೂ ಸೆಳೆದುಕೊಳ್ಳಲಿ ಎಂದು ಸವಾಲು ಹಾಕಿದರು.