ವಿಶ್ವದ ದಿಗ್ಗಜರಿಂದ ಮೋದಿಗೆ ಬರ್ತಡೇ ಶುಭಾಶಯ..! ನಮೋ 72ನೇ ಜನ್ಮದಿನದ ಆಚರಣೆ ಹೇಗಿರುತ್ತೆ..?

Advertisement

ದೆಹಲಿ : ಪ್ರಧಾನಿ ಮೋದಿಗೆ ಇಂದು 72ನೇ ಜನ್ಮದಿನ. ವಿಶ್ವದ ದಿಗ್ಗಜರಿಂದ ಮೋದಿಗೆ ಬರ್ತಡೇ ಶುಭಾಶಯ ಕೋರಿದ್ದು, ನಿನ್ನೆ ಸಮರ್​​ಖಂಡ್​ ಸಮ್ಮೇಳನದಲ್ಲೇ ದಿಗ್ಗಜರು ಶುಭಕೋರಿದ್ಧಾರೆ.

ದೇಶದ ವಿವಿಧೆಡೆ ಮೋದಿ ಅವರ ಬರ್ತಡೇಗೆ ವಿವಿಧ ಕಾರ್ಯಕ್ರಮ ನಡೆಸಲಿದ್ದು, ಇಡೀ ದಿನ ಪ್ರಧಾನಿ ನರೇಂದ್ರ ಮೋದಿ ಫುಲ್​ ಬ್ಯುಸಿ ಆಗಿರುತ್ತಾರೆ. ನಮೋ ಉಜ್ಬೇಕಿಸ್ತಾನದಿಂದ ಭಾರತಕ್ಕೆ ವಾಪಸ್ ಆಗಿದ್ಧಾರೆ.ಮೋದಿ 72ನೇ ಜನ್ಮದಿನದ ಆಚರಣೆ ಹೇಗಿರುತ್ತೆ ಗೋತ್ತಾ..?

ಮೋದಿ ಇಂದು ನಾಲ್ಕು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ಧಾರೆ. ನಮೀಬಿಯಾದಿಂದ ಮಧ್ಯಪ್ರದೇಶಕ್ಕೆ ಬರುವ ಚಿರತೆಗಳ ವೆಲ್​ಕಮ್​​ ಮಾಡಲಿದೆ. ಮಧ್ಯಪ್ರದೇಶದ ಮಹಿಳಾ ಸ್ವಸಹಾಯ ಗುಂಪಿನ ಜತೆ ಸಂವಾದ ನಡೆಸಲಿದ್ಧಾರೆ. ವಿಶ್ವಕರ್ಮ ಜಯಂತಿ ಅಂಗವಾಗಿ ಐಟಿಐ ವಿದ್ಯಾರ್ಥಿಗಳ ಜತೆ ಸಂವಾದ ಹಾಗೂ ವಿಡಿಯೋ ಕಾನ್ಫರೆನ್ಸ್​ನಲ್ಲಿ 40 ಲಕ್ಷ ವಿದ್ಯಾರ್ಥಿಗಳು ಭಾಗಿ ಸಾಧ್ಯತೆಗಳಿವೆ. ಇಂದು ಸಂಜೆ ನ್ಯಾಷನಲ್​ ಲಾಜಿಸ್ಟಿಕ್​​​ ಪಾಲಿಸಿ(ಎನ್​ಎಲ್​​ಪಿ)ಗೆ ಚಾಲನೆ ನೀಡಲಿದ್ಧಾರೆ.