ವಿಶೇಷ ಜಾಕೇಟ್ ಧರಿಸಿ ಸಂಸತ್​ಗೆ ಬಂದ ಪ್ರಧಾನಿ

Advertisement

ಇಂಡಿಯನ್ ಆಯಿಲ್, ಮರುಬಳಕೆಯ ಪಾಲಿಯೆಸ್ಟರ್ ಮತ್ತು ಹತ್ತಿಯಿಂದ ಮಾಡಿದ ಚಿಲ್ಲರೆ ಗ್ರಾಹಕ ಅಟೆಂಡೆಂಟ್‌ಗಳು ಮತ್ತು ಎಲ್‌ಪಿಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರವನ್ನು ಅಳವಡಿಸಿಕೊಂಡಿದೆ. ಪ್ಲಾಸ್ಟಿಕ್‌ ಬಾಟಲಿ ತ್ಯಾಜದಿಂದ ತಯಾರಿಸಲಾದ ಜಾಕೆಟ್ ಧರಿಸಿ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸಿದ್ದಾರೆ. ಕಳೆದ ವಾರ ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಧಾನಿಗೆ ಈ ವಿಶೇಷ ಜಾಕೆಟ್‌ಅನ್ನು ಉಡುಗೊರೆಯಾಗಿ ನೀಡಿತ್ತು.