ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತೀಯ ಸಂಸ್ಕೃತಿ

ದಶಾವತಾರ ಗಣಪತಿ
Advertisement

ರಾಣೇಬೆನ್ನೂರು: ಭಾರತೀಯ ಪುಣ್ಯ ನಾಡಿನಲ್ಲಿ ಹಿಂದು ಸಂಸ್ಕೃತಿಗೆ ಇರುವ ವೈಶಿಷ್ಟ್ಯತೆ ಬೇರೆ ಎಲ್ಲಿಯೂ ಇಲ್ಲ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ವರ್ಗದ ಜನರಿಗೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿವಿಧತೆಯಲ್ಲಿ ಏಕತೆ ಕಾಣುವ ವೈಶಿಷ್ಟ್ಯತೆ ಭಾರತೀಯ ಸಂಸ್ಕೃತಿಯಾಗಿದೆ ಎಂದು ಬಾಳೆಹೊನ್ನೂರ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ ದಶಾವತಾರ ಗಣಪತಿ `ರಾಣೆಬೆನ್ನೂರ ಕಾ ರಾಜಾ’ ಮೂರ್ತಿ ವೇದಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕ ಸಾರ್ವಜನಿಕ ಗಣೇಶೋತ್ಸವ ಏರ್ಪಡಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಮಕ್ಕೆ ವಿಶೇಷವಾದ ಮೆರಗು ಹಾಗೂ ಸಂಘಟನೆಯನ್ನು ಉಂಟು ಮಾಡಿದವರು. ಅಂತಹ ಭಾರತೀಯ ಪುಣ್ಯ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇರುವ ಪ್ರಾಚೀನತೆ ಹಾಗೂ ವೈಶಿಷ್ಟ್ಯತೆ ಬೇರೆ ಎಲ್ಲವೂ ಕಾಣಲೂ ಸಾಧ್ಯವಿಲ್ಲ ಎಂದರು.