ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು ಸೋಲಿಸಲು ವಿರೋಧಿಗಳು ಮಾಡಬಾರದ ತಂತ್ರ, ಐ.ಟಿ ದಾಳಿ ಮಾಡಿಸಿದರು. ಆದರೆ, ವಿನಯ ಕುಲಕರ್ಣಿ ಅವರ ಮೇಲೆ ಕ್ಷೇತ್ರದ ಜನರು ಹೊಂದಿದ ಪ್ರೀತಿ, ಅಭಿಮಾನ ಅವರನ್ನು ಗೆಲ್ಲಿಸಿದೆ. ಕ್ಷೇತ್ರದ ಹೊರಗಡೆ ಇದ್ದರೂ ಕ್ಷೇತ್ರದ ಜನರು ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಿದ್ದಾರೆ. ಇದು ವಿನಯ ಕುಲಕರ್ಣಿ, ಅವರ ಕುಟುಂಬದ ಗೆಲುವಲ್ಲ ಕ್ಷೇತ್ರದ ಜನರ ಗೆಲುವು ಎಂದು ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.