ವಿರಾಟಪುರ ವಿರಾಗಿ ರಥಯಾತ್ರೆಗೆ ಭವ್ಯ ಸ್ವಾಗತ

Advertisement

ಇಳಕಲ್: ಹಾನಗಲ್‌ ಕುಮಾರ ಸ್ವಾಮಿಗಳ ಜೀವನ ಕಥೆ ಆಧಾರಿತ ವಿರಾಟಪುರ ವಿರಾಗಿ ರಥಯಾತ್ರೆಗೆ ಇಂದು ಪಟ್ಟಣದಲ್ಲಿ ಭವ್ಯ ಸ್ವಾಗತ ದೊರೆಯಿತು.
ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಮಹಾಂತ ಗಂಗೋತ್ರಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಗುರುಮಹಾಂತ ಶ್ರೀಗಳು, ವಿದ್ಯಾವರ್ಧಕ ಸಂಘದ ಚೇರಮನ್ ಎಂ.ವಿ. ಪಾಟೀಲ ಮತ್ತು ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರು, ಅಕ್ಕನ ಬಳಗದ ಪದಾಧಿಕಾರಿಗಳು, ಕದಳಿ ವೇದಿಕೆಯ ಪದಾಧಿಕಾರಿಗಳು, ಬಸವ ಕೇಂದ್ರ, ವಿಜಯ ಮಹಾಂತೇಶ ತರುಣ ಸಂಘದ ಪದಾಧಿಕಾರಿಗಳು, ಸಂಘ ನಡೆಸುವ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಬಸ್ ನಿಲ್ದಾಣ, ಕಂಠಿ ಸರ್ಕಲ್ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠವನ್ನು ತಲುಪಿತು.