ಕುಷ್ಟಗಿ: ತಾಲೂಕಿನ ಕಳಮಳ್ಳಿ ತಾಂಡಾದಲ್ಲಿ ಮಂಗಳವಾರ ವಿದ್ಯುತ್ ಅವಘಡ ಸಂಭವಿಸಿ 11 ಜಾನುವಾರುಗಳು ಮೃತಪಟ್ಟಿರುವ ಘಟನೆ ಜರುಗಿದೆ.
ಕಳಮಳ್ಳಿ ತಾಂಡಾದ ರೈತರಾದ ಭದ್ರಪ್ಪ ಪವಾರ್ ಹಾಗೂ ರಾಮಪ್ಪ ಪವಾರ್ ಅವರಿಗೆ ಸೇರಿದ ದನದ ಶೆಡ್ಡ್ನ ಮುಂದೆ ಕಟ್ಟಿರುವ ಜಾನುವಾರುಗಳ ಮೇಲೆ ವಿದ್ಯುತ್ ವೈರ್ ( ತಂತಿ) ಗಾಳಿಗೆ ಹರಿದು ಬಿದ್ದು, ಒಟ್ಟು 09 ಹಸು ಸೇರಿದಂತೆ 02 ಎಮ್ಮೆಗಳು ಮೃತಪಟ್ಟಿವೆ.
ಘಟನಾ ಸ್ಥಳಕ್ಕೆ ಪಿಎಸ್ಐ ತಿಮ್ಮಣ್ಣ ನಾಯಕ, ಕಂದಾಯ , ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟ್ಟಿ ನೀಡಿ. 2-3 ಲಕ್ಷ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಶಾಸಕ ದೊಡ್ಡನಗೌಡ ಪಾಟೀಲ್, ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದಾವಲ ನದಾಫ್,ತಹಸಿಲ್ದಾರ್ ಕೆ.ರಾಘವೇಂದ್ರರಾವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.