ವಿಜಯಪುರ ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ನಿಧನ

Shambuling
Advertisement

ವಿಜಯಪುರ: ಪ್ರಸಿದ್ಧ ವಾಗ್ಮಿಗಳಾಗಿದ್ದ, ಪ್ರವಚನಗಳ ಮೂಲಕವೇ ಅಪಾರ ಭಕ್ತರನ್ನು ಸಂಪಾದಿಸಿದ್ದ ವಿಜಯಪುರ ಶಿವಬಸವ ಯೋಗಾಶ್ರಮದ ಶಂಭುಲಿಂಗ ಶ್ರೀಗಳು ಹೃದಯಾಘಾತದಿಂದ ನಿಧನರಾದರು.
ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಮಠಕ್ಕೆ ಧಾವಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು. ನಂತರ ಶ್ರೀಗಳ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.