ವಿಜಯಪುರ: ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವತ್ತ ಭರವಸೆಯಿಂದ ಮುನ್ನಡೆಯುತ್ತಿದ್ದೇವೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ, ಇಂದು ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಚಿತ್ರಗಳನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು “ಹಿಂದಿನ ಸರ್ಕಾರ ಕೇವಲ ಹಗಲು ವೇಳೆಯ ಹಾರಾಟಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಿತ್ತು. ಇದರಿಂದಾಗಿ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತಿರಲಿಲ್ಲ. ರಾತ್ರಿ ವೇಳೆಯ ಹಾರಾಟಕ್ಕೂ ಅಗತ್ಯವಿರುವ ಸೌಲಭ್ಯ ಕಲ್ಪಿಸುವಂತೆ, ಹವಾಮಾನ ಮಾಹಿತಿ ನೀಡುವ ಯಂತ್ರಗಳು, ಕಂಟ್ರೋಲ್ ರೂಂ ಯಂತ್ರಗಳನ್ನು ಕೂಡಲೇ ತರಿಸಲು ಅಧಿಕಾರಿಗಳಿಗೆ ನಿರ್ದೇಶಿಸಿರುವೆ. ಬಾಕಿ ಇರುವ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನದಲ್ಲಿ ಇಂದು ರೂ. 50 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ನೀಡಿದೆ. ಏಪ್ರಿಲ್ 2024ರ ಬದಲಾಗಿ ಫೆಬ್ರವರಿ 2024ರ ವೇಳೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿರುವೆ” ಎಂದಿದ್ದಾರೆ.