ವಿಜಯಪುರ: ಕೊಲ್ಹಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 218ರ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪತ್ತೆಯಾಗಿದೆ. ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ಬಳಿ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಕಾಣಿಸಿದೆ. ಜನವಸತಿ ಪ್ರದೇಶದಕ್ಕೆ ನುಗ್ಗಿರೋವಾಗ ಮೊಸಳೆ ಹಿಡಿಯಲು ಹಗ್ಗ ಕಟ್ಟಿದ್ದಾರೆ. ಈ ವೇಳೆ ವೇಳೆ ತಪ್ಪಿಸಿಕೊಂಡು ನದಿಗೆ ಸೇರಿ ಅಲ್ಲಿ ರಸ್ತೆ ಮೇಲೆ ಬಂದಿರುವ ಸಾಧ್ಯತೆಯಿದೆ.
ಮೊಸಳೆ ಬಾಯಿಗೆ ಬಿಗಿಯಾಗಿ ಹಗ್ಗ ಕಟ್ಟಿರುವ ಕಾರಣ ಆಹಾರ ಸೇವಿಸಲಾಗದೆ ನದಿಯಿಂದಾಚೆ ಹೊರ ಬಂದಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 218ರ ಬಳಿ ಮೊಸಳೆ ಪ್ರತ್ಯಕ್ಷವಾಗಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿರುವ ಪೊಲೀಸರು. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ ಬಳಿಕ ಮೊಸಳೆ ಬಾಯಿಗೆ ಬಿಗಿದಿರುವ ಹಗ್ಗ ಬಿಡಿಸಿ ನದಿಗೆ ಬಿಡಲಿರುವ ಅರಣ್ಯಾಧಿಕಾರಿಗಳು. ರಾಷ್ಟ್ರೀಯ ಹೆದ್ದಾರಿಗೆ ಮೊಸಳೆ ಕಾಣಿಸಿರುವುದು ವಾಹನ ಸವಾರರು ಮೊದಲು ಸ್ವಲ್ಪ ಹೆದರಿಕೆ ಮೂಡಿಸಿದರೂ ಮೊಸಳೆ ಬಾಯಿ ಹಗ್ಗ ಬಿಗಿದಿರುವುದು ಕಂಡು ಹತ್ತಿರದಿಂದ ನೋಡಲು ಮುಗಿಬಿದ್ದ ಜನರು.