ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

Advertisement

ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಜೆಸಿಬಿಗಳು ಬೆಳ್ಳಂಬೆಳಗ್ಗೆ ಘರ್ಜನೆ ನಡೆಸಿದ್ದು, ಸೋಲಾಪುರ ರಸ್ತೆಯ ಉಮದಿ ಸೂಪರ್ ಮಾರ್ಕೆಟ್‌ನಿಂದ ದಿ ಬಂಜಾರ ಕ್ರಾಸ್‌ವರೆಗೂ ಮೊದಲ ಹಂತದ ಮಾಸ್ಟರ್ ಪ್ಲಾನ್ ಕಾರ್ಯಾಚರಣೆ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸುಮಾರು 8 ಜೆಸಿಬಿಗಳು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಮಾಜಿ ಎಂಎಲ್ಎ ಉಸ್ತಾದ್ ಅವರ ಮನೆ ಕಂಪೌಂಡ್ ಸೇರಿದಂತೆ ಪ್ರತಿಷ್ಠಿತ ಹೋಟೆಲ್‌ಗಳು ನೆಲಸಮವಾಗಿವೆ. ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ಫುಟ್‌ಪಾತ್ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.