ವಿಂಟೇಜ್‌ ಸಿನಿಮಾಕ್ಕೆ ವಿಶೇಷ ನಾಮಕರಣ

ವಿಂಟೇಜ್‌ ಸಿನಿಮಾ
Advertisement

ಮಾಂಕ್ ದಿ ಯಂಗ್ ಎಂದು ಚಿತ್ರಕ್ಕೆ ಹೆಸರಿಟ್ಟಿದ್ದಾರೆ. ಗೊಂದಲವಾಗುವುದು ಸಹಜ. ಆದರೆ ಈ ಚಿತ್ರ ವಿಂಟೇಜ್ ಮಾದರಿಯದದ್ದರಿಂದ ಅದೇ ಹೆಸರು ಸೂಕ್ತ ಅನ್ನಿಸಿತು ಅನ್ನೋದು ಚಿತ್ರತಂಡದ ಸಮಜಾಯಿಷಿ. ಏನದರ ಅರ್ಥ, ಯಾಕಾಗಿ ಅದನ್ನಿಡಲಾಗಿದೆ ಎಂಬುದಕ್ಕೆ ಸಿನಿಮಾ ನೋಡಬೇಕು. ಸದ್ಯಕ್ಕೆ ರಿಲೀಸಾಗಿರುವುದು ಫಸ್ಟ್‌ಲುಕ್ ಪೋಸ್ಟರ್ ಮಾತ್ರ.
ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಮಾಸ್ಚಿತ್ ಸೂರ್ಯ. ಇದವರ ಮೊದಲನೇ ಸಿನಿಮಾ. ಆರಂಭವೇ ಭರ್ಜರಿಯಾಗಿ ಇರಬೇಕೆಂದುಕೊಂಡು ಒಂದು ವಿಭಿನ್ನ ಮಾದರಿಯ ಸಿನಿಮಾ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡರು ನಿರ್ದೇಶಕ. ಚಿತ್ರೀಕರಣ ಮುಗಿದಿದೆ. ಗತಕಾಲವನ್ನು ನೆನಪಿಸುವಂಥ ಚಿತ್ರಣಗಳಿದ್ದು ಫ್ಯಾಂಟಸಿ ಹಾಗೂ ಥ್ರಿಲ್ಲರ್ ಕೂಡಾ ಈ ಸಿನಿಮಾದಲ್ಲಿದೆ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಿ ನಿಮ್ಮ ಮುಂದೆ ಬರಬೇಕೆನ್ನುವುದು ನಮ್ಮ ಬಯಕೆ' ಎಂದರು ನಿರ್ದೇಶಕ ಸೂರ್ಯ. ... ದಿ ಯಂಗ್ ಸಿನಿಮಾಗೆ ಐವರು ನಿರ್ಮಾಪಕರಿದ್ದಾರೆ. ವಿಶೇಷವೇನೆಂದರೆ, ಆ ಐವರೂ ಚಿತ್ರದ ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ನಾಯಕ ನಟನಾಗಿ ಅಭಿನಯಿಸಿರುವ ಸರೋವರ ಜೊತೆ, ಕರ್ನಲ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ, ಲಾಲ್ ಚಂದ್, ಗೋಪಿ ಚಂದ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ನಿರ್ಮಾಣದ ಜೊತೆ ನಟನೆಯ ಆಸಕ್ತಿಯೂ ನಮಗಿತ್ತು ಎನ್ನುವುದು ನಿರ್ಮಾಪಕರ ಒಕ್ಕೊರಲ ಮಾತು. ನಮ್ಮ ಸಿನಿಮಾ ಬಗ್ಗೆ ನಾವೇ ಹೊಗಳಿಕೊಳ್ಳುವುದಕ್ಕಿಂತ ನೋಡಿದವರು ಅದನ್ನ ಮೆಚ್ಚಿಕೊಂಡು ಮಾತಾಡಬೇಕು. ಶೀಘ್ರದಲ್ಲೇ ಟ್ರೇಲರ್ ರಿಲೀಸ್ ಮಾಡಿಸುತ್ತೇವೆ. ಆಗ ನೋಡಿದವರೇ ಮಾಂಕ್ ದಿ ಯಂಗ್ ಬಗ್ಗೆ ಮಾತಾಡುತ್ತಾರೆ’ ಎಂಬ ಭರವಸೆ ನಾಯಕ ನಟ ಸರೋವರ್‌ದು. ಇವರಿಗೆ ಜೋಡಿಯಾಗಿ ಸೌಂದರ್ಯ ಗೌಡ ಅಭಿನಯಿಸಿದ್ದಾರೆ. ಉಷಾ ಭಂಡಾರಿ, ಪ್ರಣಯ ಮೂರ್ತಿ ಮುಂತಾದವರು ಚಿತ್ರದ ಇತರೆ ಪಾತ್ರಧಾರಿಗಳು.

ವಿಂಟೇಜ್‌ ಸಿನಿಮಾ