ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಡಗರ ಮನೆ ಮಾಡಿದೆ. ಮಕ್ಕಳು, ಯುವತಿಯರು, ಯುವಕರಾದಿಯಾಗಿ ಬಣ್ಣದಾಟದಲ್ಲಿ ಮುಳಗಿ ಸಂಭ್ರಮದಿಂದ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಬೆಳಗ್ಗೆಯಿಂದ ಓಣಿ ಓಣಿಯಲ್ಲಿ ಮಕ್ಕಳು ಪಿಚಕಾರಿ ಹಿಡಿದು ಓಳಿ ಆಚರಣೆ ಮಾಡಿದರು. ಕಮರಿಪೇಟೆ, ದಾಜಿಬಾನಾಪೇಟೆ, ವೀರಾಪುರ ಓಣಿ, ಮೂರುಸಾವಿರ ಮಠ ಸೇರಿದಂತೆ ವಿವಿಧೆಡೆ ಬೆಳಗ್ಗೆ ಪೂಜೆ ಸಲ್ಲಿಸಿ ಕಾಮದಹನ ಮಾಡಲಾಯಿತು.
ಮುಂಜಾನೆಯಿಂದ ಮಂದವಾಗಿದ್ದ, ಹೋಳಿ ಆಚರಣೆ 11.00 ರ ನಂತರ ಸಡಗರ ಪಡೆಯಿತು. ಯುವಕರು, ಯುವತಿಯರು, ಮಕ್ಕಳಾದಿಯಾಗಿ ಪೀಪಿ ಊದುತ್ತಾ, ಹಲಗಿ ಬಾರಿಸುತ್ತಾ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ದುರ್ಗದ ಬಯಲು, ಚನ್ನಮ್ಮ ವೃತ್ತ, ಮೇದಾರ ಓಣಿ, ಮರಾಠಾಗಲ್ಲಿ, ಚನ್ನಪೇಟೆ, ಜನತಾಬಜಾರ್ ಸೇರಿದಂತೆ ಹಳೇಹುಬ್ಬಳ್ಳಿಯಲ್ಲಿ ರಂಗಪಂಚಮಿ ಜೋರಾಗಿತ್ತು. ಸೆಲ್ಪಿ ಕ್ಲಿಕಿಸಿಕೊಳ್ಳುವುದು, ಬೈಕ್ ನಲ್ಲಿ ಸುತ್ತಾಡುವುದು ಎಲ್ಲೇಡೆ ಕಂಡು ಬಂತು.