ವರ್ಸೋವಾ-ಬಾಂದ್ರಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಸೇತು ಎಂದು ನಾಮಕರಣ

Advertisement

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ವರ್ಸೋವಾ-ಬಾಂದ್ರಾ ಸಿ-ಲಿಂಕ್‌ಗೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಹೆಸರನ್ನು ಇಡಲಾಗಿದೆ. MTHL ಅಟಲ್ ಬಿಹಾರಿ ಬಾಜ್ಪೇಯಿ ಸ್ಮೃತಿ ಶಿವಡಿ-ನವ ಅಟಲ್ ಸೇತು ಎಂದು ಹೆಸರಿಸಲಾಗಿದೆ. ಈ ಸಭೆಯಲ್ಲಿ 20ಕ್ಕೂ ಹೆಚ್ಚು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.