ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣ ದರ ಎಷ್ಟಿದೆ ಗೊತ್ತಾ?

vande bharth
Advertisement

ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು, ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವಾಗ ಬೆಂಗಳೂರು ನಗರ ಜಂಕ್ಷನ್‌ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ. ಈ ರೈಲು, ಚೆನ್ನೈ ಸೆಂಟ್ರಲ್‌ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್‌ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಗಳ ಕಾಲ ನಿಂತು, ಬೆಳಿಗ್ಗೆ 10:30 ಗಂಟೆಗೆ ಮೈಸೂರಿಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್‌ಗೆ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ತಲುಪುತ್ತದೆ.
ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಆದ ಐಆರ್‌ಸಿಟಿಸಿ ವೆಬ್ ಸೈಟ್‌ನ ಪ್ರಕಾರ, ಈ ರೈಲಿನಲ್ಲಿ ಎ.ಸಿ. ಚೇರ್ ಕ್ಲಾಸ್ (ಸಿ.ಸಿ.), ಎಕ್ಸೆಕ್ಯೂಟಿವ್ ಚೇರ್ ಕಾರ್ (ಇ.ಸಿ.) ಹಾಗೂ ಅನುಭೂತಿ ಕ್ಲಾಸ್ (ಇ.ಎ) ಕ್ಲಾಸ್ ಎಂಬ ಮೂರು ವಿಭಾಗಗಳಿವೆ.
ಉಪಹಾರ ಸೇರಿ ಮೈಸೂರು ಹಾಗೂ ಬೆಂಗಳೂರು‌ವೆರೆಗಿನ ಚೇರ್‌ ಕಾರ್ (CC) ಪ್ರಯಾಣಕ್ಕೆ ₹720 ನಿಗದಿ ಮಾಡಲಾಗಿದೆ. ಎಕ್ಸಿಕ್ಯೂಟಿವ್‌ ಚೇರ್‌ ಕಾರ್‌ (EC) ಪ್ರಯಾಣಕ್ಕೆ ₹1,215 ನಿಗದಿ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಚೇರ್‌ ಕಾರ್‌ನಲ್ಲಿ ₹5‌15 ಹಾಗೂ ಎಕ್ಸಿಕ್ಯೂಟಿವ್‌ ಚೇರ್‌ ಕಾರ್‌ ಪ್ರಯಾಣಕ್ಕೆ ₹985 ದರ ಇದೆ. ಚೆನ್ನೈನಿಂದ ಮೈಸೂರಿಗೆ ಚೇರ್‌ ಕಾರ್‌ನಲ್ಲಿ ಹಾಗೂ ಎಕ್ಸಿಕ್ಯೂಟಿವ್‌ ಚೇರ್‌ನಲ್ಲಿ ಕ್ರಮವಾಗಿ ₹ 1,200 ಹಾಗೂ ₹ 2,295 ಇದೆ. ಮೈಸೂರಿನಿಂದ ಚೆನ್ನೈಗೆ ಸಿಸಿ ಹಾಗೂ ಇಸಿ ಕೋಚ್‌ಗಳಲ್ಲಿ ‌ಕ್ರಮವಾಗಿ ₹1,365 ಹಾಗೂ ₹2,485 ಇದೆ.