ಲೋಕ ಸಮರಕ್ಕೆ ಸಿದ್ಧರಾದ ಶೆಟ್ಟರ…

Advertisement

ಹುಬ್ಬಳ್ಳಿ: ಹಾವೇರಿ, ಬೆಳಗಾವಿಯಿಂದ ಅದರಲ್ಲೂ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುವಂತೆ ಕಾರ್ಯಕರ್ತರು, ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಂತೆಯೇ, ವರಿಷ್ಠರು ಸೂಚಿಸಿದರೆ ನಾನು ಸ್ಫರ್ಧೆಗೆ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ಮರು ಸೇರ್ಪಡೆ ಆಗುವಾಗ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಈ ಹಿಂದೆ ಲೋಕಸಭೆಗೆ ಸ್ಫರ್ಧಿಸಲು ಮೂರು ಬಾರಿ ಅವಕಾಶ ಬಂದಿತ್ತು. ಆದರೆ ನನಗೆ ರಾಷ್ಟ್ರ ರಾಜಕಾರಣದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ಈಗ ಕಾರ್ಯಕರ್ತರ ಮತ್ತು ಅಭಿಮಾನಿಗಳ ಒತ್ತಡವಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಜನ ಬೆಂಬಲ ಸೂಚಿಸುತ್ತಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಖಂಡಿತವಾಗಿಯೂ ಸ್ಫರ್ಧೆಗೆ ಸಿದ್ದ ಎಂದರು.