ಲೋಕ ಕಲ್ಯಾಣಾರ್ಥವಾಗಿ ಗಣಯಾಗ: ಭರತ್ ಶೆಟ್ಟಿ

Advertisement

ಮಂಗಳೂರು: ಮಸೀದಿ ನವೀಕರಣದ ವೇಳೆ ಮಂದಿರ ರಚನೆಯ ಕುರುಹು, ದೇವಸ್ಥಾನದ ಗರ್ಭ ಗುಡಿಯನ್ನು ಹೋಲುವ ರಚನೆ ಪತ್ತೆಯಾಗಿತ್ತು. ಇದಾದ ಬಳಿಕ ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ತಾಂಬೂಲ ಪ್ರಶ್ನೆಯ ಮೊರೆ ಹೋಗಿದ್ದ ಹಿಂದೂ ಸಂಘಟನೆಗಳು, ಕಳೆದ ಮೇ ತಿಂಗಳಿನಲ್ಲಿ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಇಟ್ಟರು. ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ನಡೆಸಲು ಸಲಹೆ ಸಿಕ್ಕಿತ್ತು. ಗಣಹೋಮದ ಮೂಲಕ ಮಂದಿರ ನಿರ್ಮಾಣಕ್ಕೆ ದೇವರ ಅನುಗ್ರಹ ಪಡೆಯಲಾಗಿದ್ದು. ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಹೋಮ ನಡೆದಿದೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ಈ ಗಣಯಾಗ ನಡೆದಿದೆ. ಸ್ಥಳದಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಗಣಯಾಗ ನಡೆದಿದೆ. ನನ್ನನ್ನು ಹಿಂದೂ ಸಂಘಟನೆಗಳು ಯಾಗಕ್ಕೆ ಅಹ್ವಾನಿಸಿದ್ದರು. ನಾನು ಯಾಗಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ್ದೇನೆ. ಯಾಗದ ಬಗ್ಗೆ ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದರು.