ಲೋಕಾ ಅಧಿಕಾರಿಗಳ ಎದುರು ಭ್ರಷ್ಟ ಅಧಿಕಾರಿ ಹೈಡ್ರಾಮಾ

Advertisement

ಕೋಲಾರ: ಜೆಸ್ಕಾಂ ಇಓ ವೆಂಕಟೇಶಪ್ಪ ಮನೆ ಹಾಗೂ ಕಚೇರಿ ಮೇಲೆ ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಲೋಕಾಯುಕ್ತ ಅಧಿಕಾರಿಗಳ ಎದುರೆ ವೆಂಕಟೇಶಪ್ಪ ಹೈಡ್ರಾಮಾ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಇಓ ಆಗಿರುವ ವೆಂಕಟೇಶಪ್ಪ. ಅಧಿಕಾರಿಗಳ ದಾಖಲೆಗಳ ಪರಿಶೀಲನೆ ವೇಳೆ ಬಂಗಾರಪೇಟೆ ವಿವೇಕಾನಂದ ನಗರದ ಮನೆ ಎದುರು ಉರುಳಾಡಿ ಹೈಡ್ರಾಮಾ ಮಾಡಿದ್ದಾರೆ.
ಉರುಳಾಡಿ ಸಖತ್ ಸೀನ್ ಕ್ರಿಯೇಟ್ ಮಾಡಿದ ಭ್ರಷ್ಟ ಅಧಿಕಾರಿ ವೆಂಕಟೇಶಪ್ಪ ಹೈ ಡ್ರಾಮಾಗೆ ಕುಟುಂಬಸ್ಥರು ಹೆಜ್ಜೆ ಹಾಕಿದ್ದಾರೆ. ಬಳಿಕ ಸ್ಥಳೀಯರು ವೆಂಕಟೇಶಪ್ಪ ಅವನರನ್ನು ಆಂಬ್ಯುಲೆನ್ಸ್‌ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.