ಲವ್ ಜಿಹಾದ್‌ ತಡೆಗೆ ಸೂಕ್ತ ಕ್ರಮ : ಆರ್.ಅಶೋಕ್

ಅಶೋಕ
Advertisement

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಲವ್ ಜಿಹಾದ್ ಹಾಗೂ PFI ಸಂಘಟನೆ ಕುರಿತು ಪ್ರತಿಕ್ರಿಯೆ ನಿಡಿದ ಕಂದಾಯ ಸಚಿವ ಆರ್.ಅಶೋಕ್, ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರು ಕಾಂಗ್ರೆಸ್‌ನವರು ತಲೆಕೆಡಿಸಿಕೊಂಡಿಲ್ಲ. ದಿನ ನಿತ್ಯ ಅಮಾಯಕ ಹೆಣ್ಣು ಮಕ್ಕಳು ಬಲಿ ಆಗ್ತಿದ್ದಾರೆ.
ನಾನು ಗೃಹ ಸಚಿವ ಇದ್ದಾಗ ಇದರ ಬಗ್ಗೆ ತಿಳಿದುಕೊಂಡಿದ್ದೇನೆ. ಮೊದಲು ಇದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತೆ, ಒಬ್ಬ ಹಿಂದೂ ಯುವತಿಯನ್ನು ಮತಾಂತರ ಮಾಡಿದ್ರೆ ನಾಲ್ಕೈದು ಲಕ್ಷ ನೀಡಲಾಗ್ತಿದೆ. ಮುಸ್ಲಿಂ ಯುವಕರಿಗೆ ಬಾಡಿ ಬಿಲ್ಡಿಂಡ್, ಜಿಮ್, ಸಿನಿಮಾ ಗೆ ಕರೆದುಕೊಂಡು ಹೋಗೋದಕ್ಕೆ ಹಣ ಖರ್ಚು ಮಾಡ್ತಿದ್ದಾರೆ. ಮತಾಂತರ ಆದ ಬಳಿಕ ಕೆಲವೇ ತಿಂಗಳಲ್ಲಿ ಇನ್ನೆರೆಡು ಮದುವೆ ಆಗ್ತಿದ್ದಾರೆ. ದೇಶದ್ರೋಹಿ ಸಂಘಟನೆಗಳನ್ನು,ಮಟ್ಟ ಹಾಕಿ ಬಗ್ಗು ಬಡಿಯುತ್ತೇವೆ, ಇವರು ಒಂದು ಸಂಘಟನೆ ಬ್ಯಾನ್ ಮಾಡಿದ್ರೆ ಇನ್ನೊಂದು ಹೊಸ ಸಂಘಟನೆ ಮಾಡುವ ಗೋಮುಕ ವ್ಯಾಘ್ರಗಳು. ಮತಾಂತರ ನಿಷೇಧ ಕಾಯ್ದೆ ಕಟ್ಟನಿಟ್ಟಾಗಿ ಜಾರಿಗೆ ಬರಬೇಕು ಎಂದು ಸಿಎಂ ಜೊತೆ ಚರ್ಚೆ ಮಾಡ್ತೇನೆ ಎಂದರು.