ಲಕ್ಷಾಂತರ ಮೌಲ್ಯದ ತಂಬಾಕು ಉತ್ಪನ್ನ ಜಪ್ತಿ

ಗುಟ್ಕಾ
Advertisement

ಬೀದರ್: ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮದಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರ ತಂಡ ಲಕ್ಷಾಂತರ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗ್ರಾಮದ ಓಂಕಾರ ಭೋಸ್ಲೆ ಬಂಧಿತ ಆರೋಪಿ. ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಮಂಠಾಳ ಠಾಣೆ ಪಿಎಸ್‌ಐ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ 1.92 ಲಕ್ಷ ರೂ. ಮೌಲ್ಯದ ತಂಬಾಕು ವಸ್ತುಗಳು, ಪಾನ್ ಮಸಾಲ ಪ್ಯಾಕೇಟ್‌ಗಳು ಜಪ್ತಿ ಮಾಡಿಕೊಂಡಿದೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಪ್ತಿ ಮಾಡಿಕೊಳ್ಳಲಾದ ತಂಬಾಕು ಉತ್ಪನ್ನಗಳು ನೆರೆಯ ಮಹಾರಾಷ್ಟ್ರಕ್ಕೆ ಸರಬರಾಜು ಮಾಡಲಾಗುತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.