ಲಂಚ ಬೇಡಿಕೆ: ಬಿಟಿಡಿಎ ಇಬ್ಬರು ಸಿಬ್ಬಂದಿ ವಶಕ್ಕೆ

Advertisement

ಬಾಗಲಕೋಟೆ: ನವನಗರದಲ್ಲಿ ವಾಣಿಜ್ಯ ನಿವೇಶನ ಹಂಚಿಕೆ ಮಾಡಲು ೧.೫೦ ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟ ಬಿಟಿಡಿಎ ಇಬ್ಬರು ಸಿಬ್ಬಂದಿ ಲೋಕಾಯುಕ್ತರ ಅತಿಥಿಯಾಗಿದ್ದಾರೆ.
ಬಾಗಲಕೋಟೆ ನಗರದ ವಾರ್ಡ್ ನಂ.೩ರ ನಜಮಾ ಮೆಹಬೂಬಸಾಬ ಬಾಗವಾನ ಅವರಿಗೆ ಸೇರಿದ ಸಿಟಿಎಸ್ ಅಂಗಡಿ ಜಾಗೆ ನಂ.೧೪೮ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಹೊಂದಿದ್ದು, ಅದಕ್ಕೆ ನಿವೇಶನ ಹಂಚಿಕೆ ಮಾಡಲು ೧.೫೦ ಲಕ್ಷ ರೂ.ಗಳನ್ನು ಬಿಟಿಡಿಎ ಇಂಜನಿಯರಿಂಗ್ ವಿಭಾಗ-೨ರ ಕಚೇರಿ ಅಧೀಕ್ಷಕರ ಸುರೇಶ್ ಹಾಗೂ ಬಿಟಿಡಿಎ ಆರ್‌ಒ ಕಚೇರಿಯ ಕೇಸ್ ವರ್ಕರ್ ವಿರುಪಾಕ್ಷ ಅವರು ಏ.೧೪ರಂದು ೨೦ ಸಾವಿರ ರೂ.ಗಳ ಲಂಚದ ಹಣಪಡೆದು ಮತ್ತೆ ೩೦ ಸಾವಿರ ರೂ.ಗಳ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಬಂದ ನಜಮಾ ಅವರ ಪುತ್ರ ಬಂದೇನವಾಜ್ ಬಾಗವಾನ್(ಹೊನವಾಡ) ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದನ್ನವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಎನ್.ಪುಷ್ಪಲತಾ ಅವರ ನೇತೃತ್ವದಲ್ಲಿ ಸಿಪಿಐಗಳಾದ ಎಂ.ಎಚ್ ಬಿದರಿ, ಬಿ.ಎಂ. ಅವಟಿ ಹಾಗೂ ಸಿಬ್ಬಂದಿಗಳಾದ ಮುಷ್ಟಿಗೆರಿ, ದೊಡ್ಡಮನಿ, ಮಂಜುನಾಥ ದೇಸಾಯಿ, ಹಲಗತ್ತಿ, ದೇಸಾಯಿ, ಬಳಬಟ್ಟಿ, ಪೂಜಾರಿ, ಮುರನಾಳ, ಚುರ್ಚ್ಯಾಳ, ಮುಲ್ಲಾ, ಮಾಸರಡ್ಡಿ, ಪಾಟೀಲ, ವಾಲಿಕಾರ, ಗೌಡರ, ಜೋಕೆರ ಅವರು ಕಾರ್ಯಾಚರಣೆ ಕೈಗೊಂಡು ಇಬ್ಬರು ಭ್ರಷ್ಟ ಸಿಬ್ಬಂದಿಯನ್ನು ಬಲೆಗೆ ಬೀಳಿಸಿದ್ದಾರೆ.