ರೂಪಾ-ರೋಹಿಣಿಯನ್ನು ಅಮಾನತು ಮಾಡಿ

ಎಚ್.‌ ವಿಶ್ವನಾಥ
Advertisement

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನು ಅಮಾನತು ಮಾಡುವಂತೆ ಹೆಚ್ ವಿಶ್ವನಾಥ್ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಹಿರಿಯ ಅಧಿಕಾರಿಗಳಾದ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಬೀದಿ ಜಗಳ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಧಾರಾವಾಹಿಯಾಗಿ 3 ದಿನಗಳಿಂದ ಪ್ರಾರಂಭವಾಗಿದೆ. ಇವೆಲ್ಲವನ್ನೂ ಮಾಧ್ಯಮಗಳ ಮೂಲಕ ನೋಡುತ್ತಿರುವ ನಾಡಿನ ಜನರು ನಮ್ಮ ಆಡಳಿತದ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಅರ್ಥೈಸುತ್ತಿದ್ದಾರೆ ಮತ್ತು ಸರ್ಕಾರದ ಕ್ಷಮತೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನೈತಿಕತೆ ಕಳೆದುಕೊಂಡ ನಡತೆಗೆಟ್ಟ ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ? ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಇವರನ್ನು ಅಮಾನತಿನಲ್ಲಿಟ್ಟು, ವಿಚಾರಣೆ ಪ್ರಾರಂಭಿಸಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್, ಈಗಾಗಲೇ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ. ಆದರೆ ಅವರಿಗೆ ಜಾಗ ತೋರಿಸಿಲ್ಲ. ಈ ಪ್ರಕರಣದಲ್ಲಿ ಬಿಗಿಯಾದ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.