ಅಮೆರಿಕದಲ್ಲೂ ರಾಹುಲ್ ಟ್ರಕ್ ಯಾತ್ರೆ

Advertisement

ವಾಷಿಂಗ್ಟನ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದು. ಅವರು ಇತ್ತೀಚೆಗೆ ಟ್ರಕ್‌ನಲ್ಲಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ 190 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ಟ್ರಕ್ ಚಾಲಕ ತೇಜಿಂದರ್ ಗಿಲ್ ಅವರೊಂದಿಗೂ ಮಾತನಾಡಿದ್ದು. ಈ ಸಂಭಾಷಣೆಯ ವಿಡಿಯೋವನ್ನು ರಾಹುಲ್ ಕೂಡ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ಟ್ರಕ್ ಚಾಲಕನ ಮಾಸಿಕ ಗಳಿಕೆಯ ಬಗ್ಗೆಯೂ ರಾಹುಲ್ ಪ್ರಶ್ನಿಸಿದ್ದಾರೆ. ಚಾಲಕ ತೇಜಿಂದರ್ ಗಿಲ್ ತಿಂಗಳ ಗಳಿಕೆಯನ್ನು ಹೇಳಿದಾಗ, ರಾಹುಲ್ ಕೂಡ ದಿಗ್ಭ್ರಮೆಗೊಂಡರು. ರಾಹುಲ್ ಗಾಂಧಿ ಈ ಹಿಂದೆ ಪಂಜಾಬ್‌ನಲ್ಲೂ ಟ್ರಕ್ ಟ್ರಿಪ್ ಮಾಡಿದ್ದರು. ನಂತರ ಅವರು ಅಮೃತಸರದ ಟ್ರಕ್ ಚಾಲಕರೊಂದಿಗೆ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.