ರಾಹುಲ್ ಗಾಂಧಿ ಸ್ವಾಗತಕ್ಕೆ ಸೇರಿದ್ರು ಸಾವಿರಾರು ಜನ

Advertisement


ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆ ಬಳ್ಳಾರಿಗೆ ಬಂದಾಗ ಅದ್ಧೂರಿ ಸ್ವಾಗತ ಮಾಡುವ ಕನಸು ನನಸಾಗಲಿಲ್ಲ.
ಆಂಧ್ರಪ್ರದೇಶದ ಗಡಿ ಭಾಗದ ಓಬಳಾಪುರಂ ಗ್ರಾಮದಿಂದ ಯಾತ್ರೆ ನಡೆಯಬೇಕಿತ್ತು. ಆದರೆ ಜೆಡ್+ ಸೆಕ್ಯೂರಿಟಿ ಕಾರಣಕ್ಕೆ ಕೆಲ ನಿಯಮದಲ್ಲಿ ದೋಷ ಅದ ಕಾರಣ ರಾಹುಲ್ ಗಾಂಧಿ ಅವರ ಎಸ್ ಪಿ ಜಿ ಅಂದ್ರ ಗಡಿಭಾಗದ ಓಬಳಾಪುರಂ, ಹಲಕುಂದಿ ಗ್ರಾಮದ ಮಧ್ಯ ಗಡಿ ಭಾಗದಿಂದ ನೇರ ಕಾರ್ ನಲ್ಲಿ ಕುಳಿತು ರಾತ್ರಿ ತಂಗಲು ವ್ಯವಸ್ಥೆ ಮಾಡಿದ ಹಲಕುಂದಿ ಮಠಕ್ಕೆ ನೇರ ಆಗಮಿಸಿ ಇಂದಿನ ಪಾದಯಾತ್ರೆ ಪೂರ್ಣಗೊಳಿಸಿದರು.
ಆದರೆ ರಾಹುಲ್ ಗಾಂಧಿ ಸ್ವಾಗತಕ್ಕೆ ಆಗಮಿಸಿದ್ದ 150 ಮಂಗಳ ಮುಖಿಯರ ಪೂರ್ಣ ಕುಂಭ ಸೇರಿದಂತೆ ವಿವಿಧ ಕಲಾ ತಂಡಗಳು ಸುಮ್ಮನೆ ಕಾದು ವಾಪಾಸ್ ಆಗಬೇಕಾಯಿತು.
ರಾಹುಲ್ ಗಾಂಧಿ ಅವರು ಮಠದ ಆವರಣದಲ್ಲಿ ನಿರ್ಮಿಸಿದ್ದ ಕ್ಯಾಂಪ್ ಸೇರಿದ ಮೇಲೆ ಸಾವಿರಾರು ಜನ ಮಠದ ಮುಂದೆ ಕಾದು ನಿಂತರು.
ರಾಹುಲ್ ಗಾಂಧಿಯ ಒಂದು ಝಲಕ್ ನೋಡಲು ಸಾವಿರಾರು ಜನ ತಡರಾತ್ರಿ ಆದರೂ ನಿಂತೇ ಇದ್ದರು. ಅವರನ್ನು ವಾಪಾಸ್ ಕಳುಹಿಸಲು ಪೊಲೀಸ್ ಹರ ಸಹಾಸ ಪಟ್ಟರು.
ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲಿ ಬಂದ ರಾಜ್ಯ ನಾಯಕರು ಸಹಿತ ಕ್ಯಾಂಪ್ ಒಳಕ್ಕೆ ಹೋಗಿ ರಾಹುಲ್ ಗಾಂಧಿ ಅವರನ್ನ ಭೇಟಿ ಆಗಲು ಆಗದೆ ಸುಮ್ಮನೆ ವಾಪಾಸ್ ಅದರು.
ಇನ್ನು ಪಾದಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಆರಂಭ ಆದ ಪಾದಯಾತ್ರೆಯಲ್ಲಿ ನಿರಂತರವಾಗಿ ಪಾಲ್ಗೊಂಡ ಯತ್ತಿಗಳನ್ನ ಎಸ್ ಪಿ ಜಿ ವಿಷೇಹ ಕಾಳಜಿ ವಹಿಸಿ, ಪರಿಶೀಲಿಸಿ ಕ್ಯಾಂಪ್ ಒಳಕ್ಕೆ ಹೋಗಲು ಅನುಮತಿ ನೀಡಿತು.
ಈ ವೇಳೆ ಕೆಲ ರಾಜಕಾರಣಿಗಳು ಪ್ರಭಾವ ಬಳಸಿ ಒಳ ಹೋಗಲು ಯತ್ನಿಸಿದ್ದರು. ಈ ಕಾರಣಕ್ಕೆ ಪೊಲೀಸರು ಗರಂ ಅದ ಸನ್ನಿವೇಶ ಸಹ ಜರುಗಿತು.