ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದು, ಭೂಕಂಪನದ ಅನುಭವವಾದ ತಕ್ಷಣ ಜನರು ಕಟ್ಟಡಗಳಿಂದ ಹೊರಗಡೆ ಓಡಿ ಬಂದಿದ್ದಾರೆ.
ಮೊದಲು 4.6 ಹಾಗೂ 2ನೇ ಬಾರಿ 6.2 ತೀವ್ರತೆ ಭೂಕಂಪವಾದ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌ ಸೇರಿದಂತೆ ಪಂಜಾಬ್, ಹರಿಯಾಣ, ಉತ್ತರಾಖಂಡ, ಆಸ್ಸಾಂ ಹಾಗೂ ನೇಪಾಳದಲ್ಲೂ ಭೂಕಂಪನ ಸಂಭವಿಸಿದೆ.