ಹುಬ್ಬಳ್ಳಿ : ರಾಷ್ಟ್ರಪತಿಯರ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಾಲಿಕೆ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಸೆ. ೨೬ರಂದು ನಡೆಯುವ ರಾಷ್ಟ್ರಪತಿಗೆ ನಡೆಯುವ ಪೌರ ಸನ್ಮಾನ ಕಾರ್ಯಕ್ರಮವನ್ನು ಬಹಿಷ್ಕರಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ದೊರಾಜ್ ಮಣಿಕುಂಟ್ಲ ಹೇಳಿದ್ದಾರೆ.
ಪಾಲಿಕೆಯಲ್ಲಿ ಭಾನುವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಎಲ್ಲದರಲ್ಲೂ ಬಿಜೆಪಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೌರ ಸನ್ಮಾನ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾರ್ಯಕ್ರಮ ಯಶಸ್ಸು ಸಲುವಾಗಿ ಎಲ್ಲ ಕಾರ್ಪೋರೆಟರ್ ಗಳ ಒಳಗೊಂಡು ವಿವಿಧ ಕಮಿಟಿ ರಚಿಸಲಾಗುತ್ತದೆ ಎಂದು ಮೇಯರ್ ತಿಳಿಸಿದ್ದರು. ಆ ಕೆಲಸ ಮಾಡಲಿಲ್ಲ. ಪ್ರತಿ ಹಂತದಲ್ಲಿ ಪ್ರತಿಪಕ್ಷದವರನ್ನು ಕಡೆಗಣಿಸುತ್ತ ಬಂದರು. ರಾಷ್ಟ್ರಪತಿ ಯವರೊಂದಿಗೆ ಪೋಟೊ ಸೇಶನ್ ಗೂ ಅವಕಾಶ ಇಲ್ಲ ಎಂದು ಕೊನೆ ಗಳಿಗೆಯಲ್ಲಿ ಹೇಳುತ್ತಾರೆ. ಜಾಹೀರಾತು ಬ್ಯಾನರ್ ಗಳಲ್ಲೂ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸುವ ಮೂಲಕ ಅವಮಾನಿಸಿಲಾಗಿದೆ ಎಂದು ದೊರಾಜು ದೂರಿದರು.
ಮಿತಿ ಮೀರಿದ ದುಂದುವೆಚ್ಚ:
ಪೌರಸನ್ಮಾನ ಹೆಸರಿನಲ್ಲಿ ದುಂದು ವೆಚ್ಚ
ಮಾಡಲಾಗುತ್ತಿದೆ. ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕರೆಯಲಾಗಿದೆ. ಇದರಲ್ಲೂ ಅವ್ಯವಹಾರವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಪೋರೆಟರ್ ಗಳಾದ ಇಮ್ರಾನ್ ಯಲಿಗಾರ, ಆರೀಫ್ ಭದ್ರಾಪುರ, ಸೆಂಂಥಿಲ್ ಕುಮಾರ್, ,ಇಲಿಯಾಸ್ ಮನಿಯಾರ್, ಇಕ್ಬಾಲ್ ನವಲೂರ, ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಪ್ರಕಾಶ ಬುರಬುರೆ ಸುದ್ದಿಗೋಷ್ಠಿಯಲ್ಲಿದ್ದರು.