ರಾಷ್ಟ್ರೀಯ ಯುವಜನೋತ್ಸವ ವೆಬ್‌ಸೈಟ್‌ಗೆ ಚಾಲನೆ

ಜಾಲತಾಣ
Advertisement

ಧಾರವಾಡ: ಬರುವ ಜ. ೧೨ರಿಂದ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದ ವೆಬ್‌ಸೈಟ್‌ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೃಜನಾ ರಂಗಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಮ್ಮ ಜಿಲ್ಲೆಯ ಆತಿಥ್ಯವನ್ನು ಇತರ ರಾಜ್ಯದ ಯುವಕರಿಗೆ ನೀಡುವುದರಿಂದ ನಮ್ಮ ನಾಡಿನ, ಸಂಸ್ಕೃತಿಯ ಪರಿಚಯವಾಗುತ್ತದೆ. For the youth, By the youth, Attend the youth ಅನ್ನುವುದು ೨೬ನೇ ಈ ರಾಷ್ಟ್ರೀಯ ಯುವಜನೋತ್ಸವದ ಘೋಷವಾಕ್ಯವಾಗಿದೆ ಎಂದರು.
ಇಂದು ಬಿಡುಗಡೆಗೊಳಿಸಿರುವ www.nyfhubballidharwad2023.in ವೆಬ್ ಪೋರ್ಟಲ್‌ನ್ನು ಉಪಯೋಗಿಸಿಕೊಂಡು, ಪಾಸ್ ಪಡೆಯಬೇಕು, ಪಾಸ್‌ಗಳನ್ನು ತಮ್ಮ ಮೊಬೈಲ್‌ನಲ್ಲಿಯೇ ಪಡೆದುಕೊಂಡು ಜ. ೧೨ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.


ಶಾಸಕರಾದ ಜಗದೀಶ ಶೆಟ್ಟರ, ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಇತರರು ಇದ್ದರು