ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯಾಗಿ ಸ್ಮೃತಿ ಮಂಧನಾ

RCB
Advertisement

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸ್ಮೃತಿ ಮಂಧನ ಅವರನ್ನು ನಾಯಕಿಯಾಗಿ ಘೋಷಿಸಿದೆ. ಬೆಂಗಳೂರು ಫ್ರಾಂಚೈಸಿಯು ಇಂದು(ಶನಿವಾರ) ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಶೇಷ ಬೆಳವಣಿಗೆಯ ಬಗ್ಗೆ ದೃಢಪಡಿಸಿದೆ.


ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ತುಂಬಾ ವಿಶೇಷವಾದ ಆರ್‌ಸಿಬಿ ತಂಡವನ್ನು ಮತ್ತೊಂದು ಜೆರ್ಸಿ 18 ಸಂಖ್ಯೆ ಮುನ್ನಡೆಸುವ ಸಮಯ. ಹೌದು, ನಾವು ಸ್ಮೃತಿ ಮಂಧನ ಬಗ್ಗೆ ಮಾತನಾಡುತ್ತಿದ್ದೇವೆ. ಚೆನ್ನಾಗಿ ನಾಯಕತ್ವ ನಿಭಾಯಿಸಿ ಸ್ಮೃತಿ. ನಿಮಗೆ ಅತ್ಯುತ್ತಮ ತಂಡ ಮತ್ತು ವಿಶ್ವದ ಅತ್ಯುತ್ತಮ ಅಭಿಮಾನಿಗಳ ಬೆಂಬಲವಿದೆ” ಎಂದು ವಿರಾಟ್ ಕೊಹ್ಲಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.