ರಾಯಚೂರು: ನಗರದ ಗಾಂಧಿ ವೃತ್ತದಲ್ಲಿರುವ ಜೀರ್ಣೊದ್ಧಾರಗೊಂಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪತ್ನಿ ಪ್ರಿಯಾ ಜತೆ ಭೇಟಿ ನೀಡಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ವಿಶೇಷ ಪೂಜೆ ಸಲ್ಲಿಸಿದರು.
ಜೀರ್ಣೋದ್ಧಾರಗೊಂಡ ಈ ದೇವಸ್ಥಾನವನ್ನು ಈಚೆಗೆ ನಡೆದ ಹನುಮ ಜಯಂತಿಯನ್ನು ಲೋಕಾರ್ಪಣೆ ಮಾಡಲಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆಯೂ ಈ ದೇವಸ್ಥಾನಕ್ಕೆ ಸುದೀಪ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ ಮತ್ತೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ದಂಪತಿಯಿಂದ ಹೋಮ, ಹವನ ವಿಶೇಷ ಪೂಜೆ ನಡೆಸಲಾಗುತ್ತಿದೆ. ಸುದೀಪ್ ರನ್ನು ನೋಡಲು ಜನ ದೇವಸ್ಥಾನ ಎದುರು ಬಿರು ಬಿಸಿಲಲ್ಲಿ ಜನ ಜಮಾಯಿಸಿದ್ದಾರೆ.