ರಾಮುಲುಗೆ ಭಾರೀ ಮುಖಭಂಗ

Advertisement

ಬಳ್ಳಾರಿ:ಬಿಜೆಪಿ ರಾಜ್ಯ ನಾಯಕ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ನಿಂತು ಸುದ್ದಿಯಲ್ಲಿ ಇದ್ದ ರಾಮುಲು ಇದೀಗ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ರಾಮುಲು 15 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ನಾಗೇಂದ್ರ ಒಟ್ಟು 90273 ಮತ ಪಡೆದರೆ, ರಾಮುಲು 63446 ಮತ ಪಡೆದು 27,277 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
ಈ ಮೂಲಕ ಬಿಜೆಪಿ ಅತ್ಯಂತ ಪ್ರಭಾವಿ ನಾಯಕ ಎನ್ನಿಸಿಕೊಂಡ ರಾಮುಲು ತನ್ನದೇ ಶಿಷ್ಯನ ಮುಂದೆ ಮಾಡಿ ಊರಿದ್ದಾರೆ.
ಇನ್ನು 20 ಸಾವಿರ ಮತಗಳ ಎಣಿಕೆ ಮಾತ್ರ ಬಾಕಿ ಇದೆ. ಅಲ್ಲಿಗೆ ರಾಮುಲು ಹೀನಾಯ ಸೋಲು ಕಂಡಿದ್ದು ನಿಜ ಆಗಿದೆ.