ರಾಮಮಂದಿರ ಉದ್ಘಾಟನೆಗೆ ಕರುನಾಡಿನ ಜನರಿಗೆ ಆಹ್ವಾನ

Advertisement

ಕಲಬುರಗಿ: 2024 ರ ಜನೆವರಿ ತಿಂಗಳಲ್ಲಿ ಅಯೋಧ್ಯೆಯ ಲ್ಲಿ ರಾಮಲಲ್ಲ ಮಂದಿರ ಉದ್ಘಾಟನೆ ಗೆ ಕರುನಾಡಿನ ಜನರಿಗೆ ಆಹ್ವಾನ ನೀಡುತ್ತೀದ್ದೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮನವಿ ಮಾಡಿದರು.
ಚಿತ್ತಾಪುರ ಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪರ ಪ್ರಚಾರ ಹಾಗೂ ಬಹಿರಂಗ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು. ಶ್ರೀ ರಾಮನ ಸೇವೆ ಮಾಡಲು ಮುಕ್ತ ಅವಕಾಶ ವಿದ್ದು, ತಾವೆಲ್ಲರೂ ಬಂದು ಆಶೀರ್ವಾದ ಪಡೆದುಕೊಳ್ಳಬೇಕು ಎಂದರು.
ಉತ್ತರ ಪ್ರದೇಶ ರಾಮ ಜನ್ಮ ಭೂಮಿಯಾದರೆ, ಕರ್ನಾಟಕ ಹನುಮನ ಜನ್ಮಸ್ಥಳವಾಗಿದೆ. ಭಾರತದಲ್ಲಿ ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯವೇ ದೊಡ್ಡ ಪಾತ್ರವಿದೆ. ಶ್ರೇಷ್ಠ ಭಾರತವಾಗಲು ಉಭಯ ರಾಜ್ಯಗಳ ಕೊಡುಗೆ ಬಹಳಷ್ಡಿದೆ ಎಂದ ಯೋಗಿ, ರಾಮಮಂದಿರ ಜೊತೆಯಲ್ಲಿ ಹನುಮ ಮಂದಿರ ಉದ್ಘಾಟನೆ ಹಾಗೂ ಹನುಮ ಗಡಿಯಾರ ಸ್ಥಾಪಿಸಲಾಗಿದೆ ಎಂದರು.
ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ೧.೨೫ ಲಕ್ಷ ಮತಗಳ ಅಂತರದಿಂದ ಸೋಲಿಸಿದಂತೆ ಈ ಬಾರಿ ವಿಧಾನಸಭೆ ಎಲೆಕ್ಷನ್‌ನಲ್ಲಿ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರನ್ನೂ ಹೀನಾಯವಾಗಿ ಸೋಲಿಸಬೇಕು ಎಂದು ಕರೆ ನೀಡಿದರು. ಅಲ್ಲದೆ ಪ್ರಿಯಾಂಕ ಖರ್ಗೆ ಅವರ ಠೇವಣಿ ಜಪ್ತಿಯೂ ಆಗಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಸಾದನೆಗಳೇ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.