ರಾಮಕೃಷ್ಣ ಮಠದ ಅಧ್ಯಕ್ಷ ಗೌತಮಾನಂದಜೀ

Advertisement

ಕೋಲ್ಕತಾ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ೧೭ನೇ ಅಧ್ಯಕ್ಷರಾಗಿ ಬೆಂಗಳೂರು ಮೂಲದ ಸ್ವಾಮಿ ಗೌತಮಾನಂದಜೀ ಅವರು ಆಯ್ಕೆಯಾಗಿದ್ದಾರೆ.
ಮಾ. ೨೬ರಂದು ನಿಧನರಾದ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ಅವರ ಉತ್ತರಾಧಿಕಾರಿಯಾಗಿ ಗೌತಮಾನಂದಜೀ ಅವರನ್ನು ಬುಧವಾರ ಆಯ್ಕೆಮಾಡಲಾಗಿದೆ.
೯೫ ವರ್ಷದ ಹಿರಿಯ ಸನ್ಯಾಸಿ ಗೌತಮಾನಂದಜೀಯವರು ೧೯೨೯ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ೧೯೫೧ ರಲ್ಲಿ ರಾಮಕೃಷ್ಣಾಶ್ರಮ ಸೇರಿದ ಅವರು ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈವರೆಗೆ ಹಿರಿಯ ಉಪಾಧ್ಯಕ್ಷರಾಗಿದ್ದರು. ಅರುಣಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ಗಿರಿಜನರ ಕಲ್ಯಾಣಕ್ಕಾಗಿ ೨೦ ವರ್ಷಗಳ ಕಾಲ ಶ್ರಮಿಸಿದ್ದಾರೆ.