ರಾತ್ರೋರಾತ್ರಿ ರಸ್ತೆ ದುರಸ್ತಿಗೆ ಮುಂದಾದ ಅಧಿಕಾರಿಗಳು

Advertisement

ಕುಷ್ಟಗಿ: ಪಟ್ಟಣದ ರಸ್ತೆಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಮತ್ತು ಕನ್ನಡಪರ ಸಂಘಟನೆಗಳು ರಸ್ತೆ ಮಧ್ಯದಲ್ಲಿ ಸಸಿ ನಾಟಿ ಮಾಡಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಧೋರಣೆ ವಿರುದ್ಧ ಹೋರಾಟ ಮಾಡಿದ್ದರು ಹೋರಾಟಕ್ಕೆ ಯಾವುದೇ ಕಿಮ್ಮತ್ತು ಕೊಡದೆ ಮೊಂಡುತನದಿಂದ ವರ್ತಿಸುತ್ತಿದ್ದ ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ದುರಸ್ತಿಗೆ ಮುಂದಾಗಿರುವುದು ಕಂಡುಬಂದಿದೆ.

ಕುಷ್ಟಗಿ ಪಟ್ಟಣಕ್ಕೆ ಅ. 12ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಷ್ಟಗಿಗೆ ಜನೋತ್ಸವ ಕಾರ್ಯಕ್ರಮದ ನಿಮಿತ್ಯವಾಗಿ ಆಗಮಿಸುವ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತದಿಂದ ಹಿಡಿದುಕೊಂಡು ಬಸ್ ನಿಲ್ದಾಣದವರೆಗೂ ಪ್ಯಾಚ್ ವರ್ಕ್ ಮಾಡಲು ರಾತ್ರೋರಾತ್ರಿ ಅಧಿಕಾರಿಗಳು ದೋಚಿದ್ದಾರೆ ಮತ್ತು ದುರಸ್ತಿಗೆ ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ: ಕುಷ್ಟಗಿ ಪಿಡಬ್ಲ್ಯೂಡಿ ಉಪ ವಿಭಾಗದ ರಾಜ್ಯ ಹೆದ್ದಾರಿ ನಿರ್ವಹಣಾ ಅನುದಾನದಡಿ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತಿತ್ತು. ಅದೇ ರೀತಿ ಈ ವರ್ಷವೂ ಕೂಡ ತೆಪೆ ಕಾರ್ಯ ನಡೆಯುತ್ತಿದೆ ಎಂದು, ಕೆಲ ಯುವಕರು ಕಾಮಗಾರಿ ಸ್ಥಳದಲ್ಲಿದ್ದ ಜೆಸಿಬಿಯನ್ನು ತಡೆದು ನಿಲ್ಲಿಸಿ, ಸಿಎಂ ಬರುವಾಗ ಎಲ್ಲರಿಗೆ ಎಚ್ಚರವಾಗಿದಿಯಾ? ನಾವು ಜನಸಾಮಾನ್ಯರು,ದಿನನಿತ್ಯ ಸಂಚರಿಸಿದಂತೆ ಸಿಎಂ ಕೂಡಾ ಇದೇ ರಸ್ತೆಯಲ್ಲಿ ಸಂಚರಿಸಲಿ, ಈ ರಸ್ತೆಯ ದುಸ್ಥಿತಿ ಅವರ ಗಮನಕ್ಕೂ ಬರಲಿ, ಸಂಪೂರ್ಣ ರಸ್ತೆ ನಿರ್ಮಾಣ ಕಾಮಗಾರಿ ಮಾಡುವುದಾದರೆ ಮಾಡಿ ಇಲ್ಲದಿದ್ದರೆ,ಯಾವುದೇ ಕಾರಣಕ್ಕೂ ಪ್ಯಾಚ್ ವರ್ಕ್ ಮಾಡಬೇಡಿ ಎಂದು ಯುವಕರು ಬಿಗಿ ಪಟ್ಟು ಹಿಡಿದರು…

ನಂತರ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಯುವಕರ ಮನವೊಲಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ… ನಂತರ ಸ್ಥಳಕ್ಕೆ ಆಗಮಿಸಿದ ಪಿ.ಎಸ್.ಐ ಮೌನೇಶ್ ರಾಥೋಡ ಮತ್ತು ಸಿಪಿಐ ನಿಂಗಪ್ಪ ಆರ್. ಮದ್ಯಪಾನ ಸೇವಿಸಿ ವಿನಾಕಾರಣ ಕಾಮಗಾರಿಗೆ ತಾಕೀತು ಮಾಡುತ್ತಿರುವುದನ್ನು ಮನಗಂಡು, ಕೆಲ ಯುವಕರನ್ನು ಠಾಣೆಗೆ ಕರೆದೊಯ್ದರು..