ರಾಜ ಅಂಬರೀಷನ ಧರ್ಮನಿಷ್ಠೆ

PRATHAPPHOTOS.COM
Advertisement

ರಾಜನಾದವನಲ್ಲಿ ಮೊತ್ತ ಮೊದಲು ಶ್ರದ್ಧೆ ಇರಬೇಕು. ಅದು ರಾಜರ್ಷಿ ಅಂಬರೀಷನಲ್ಲಿ ಇತ್ತು. ಒಬ್ಬನನ್ನು ನೋಡಿ ಇನ್ನೊಬ್ಬರು ಒಳ್ಳೆಯದನ್ನು ಕಲಿತರೂ ಅದು ಧರ್ಮ.
ಯಾವ ರೀತಿಯ ಶ್ರದ್ಧೆ ಅವನಲ್ಲಿ ಇದೆ ಸ ವೈ ಮನಃ ಕೃಷ್ಣ ಪದರಾವಿಂದಯೋಃ ಸಾಧ್ಯ ಇದೆ. ಯಾವನೋ ಒಬ್ಬ ವ್ಯಕ್ತಿ ಬರುತ್ತಾನೆ ಏನೋ ಒಂದು ಕಷ್ಟ ಇದೆ ಎಂದು ಹೇಳಿ ಕೊಳ್ಳುತ್ತಾನೆ ನಿಮ್ಮ ಕೈಲಾದಷ್ಟು ಧನ ಸಹಾಯವನ್ನು ಮಾಡಿ ಔದಾರ್ಯವನ್ನು ತೋರುತ್ತೀರಿ ಇದು ಭೂಷಣವೇ, ಆದರೆ ಒಂದು ಹೆಜ್ಜೆ ಮುಂದೆ ಹೋಗಬೇಕು. ಕಷ್ಟ ತೊಡಿಕೊಂಡ ನೀವು ಹಣ ಕೊಟ್ಟು ಸಹಾಯ ಮಾಡಿದಿರಿ. ಇಲ್ಲಿಗೆ ಔದಾರ್ಯ, ಆದರೆ ಇಲ್ಲಿಗೆ ಮಗಿಯಬಾರದು.
ಸ ವೈ ಕೃಷ್ಣ ಮನಃ ಪದಾರವಿಂದಯೋಃ ಕೈ ಎತ್ತಿ ಹಣ ಕೊಟ್ಟಾಗಲೂ ಮನಸ್ಸು ಭಗವಂತನ ಕಡೆಗೆ ಇರಬೇಕು ಜನ್ಮಾಂತರದಲ್ಲಿ ಮಾಡಿದ ಯಾವುದೋ ಒಂದು ಕರ್ಮ. ಆ ಕರ್ಮದ ಫಲವಾಗಿ ದಾರಿದ್ರ‍್ಯವನ್ನು ಅನುಭವಿಸುವ ಫಲ ಇವನ ಪಾಲಿಗೆ ಬಂತು ಅದು ಭವಂತನ ಇಚ್ಛೆಯೇ ಅವರವರು ಮಾಡಿದ ಕರ್ಮಗಳ ಫಲಕ್ಕೆ ತಕ್ಕಂತೆ ಕರ್ಮಗಳನ್ನು ಕೊಟ್ಟು ಭಗವಂತ ಶುದ್ಧಗೊಳಿಸುತ್ತಾನೆ. ದೇವರು ತಪ್ಪು ಮಾಡಿದ ಮಕ್ಕಳಿಗೆ ಒಂದು ಪೆಟ್ಟು ಕೊಟ್ಟು ಇನ್ನೊಮ್ಮೆ ತಪ್ಪು ಮಾಡದಂತೆ ಬುದ್ಧಿ ಹೇಳಿ ತಪ್ಪಿಗೆ ಶಿಕ್ಷೆಯನ್ನು ಕೊಟ್ಟು ತಿದ್ದುತ್ತಾನೆ. ಹಾಗೇ ಬೇಡುವವರಿಗೆ ಕೊಡುವ ಅವಕಾಶ ಸಿಕ್ಕಾಗ ದೇವರು ಅಂಥವನಿಗೆ ಕೊಡುವ ಸದಾವಕಾಶ ಕೊಟ್ಟಿದ್ದಾನಲ್ಲವೆನ್ನ ಬೇಕೇ ವಿನಹ ಆತನ ಪ್ರಾರಬ್ಧ ಇತ್ಯಾದಿಗಳ ಬಗ್ಗೆ ಯೋಚಿಸಬಾರದು.
ಇದೂ ಕೂಡ ಭಗವಂತನ ಒಂದು ಮಹಿಮೆಯೇ ದಾರಿದ್ರ‍್ಯದ ದುಃಖದಿಂದ ಬಳಲಿ ಬಂದು ಕೈ ಚಾಚಿದ ಒಬ್ಬ ಭಿಕ್ಷುಕನನ್ನು ನೋಡುವಾಗ ಒಬ್ಬ ಭಿಕ್ಷುಕ ಕಂಡ ಅವನ ದಾರಿದ್ರ‍್ಯ ಮನಸ್ಸಿಗೆ ಅನಿಸಿದೆ ವೇಷ ಭೂಷಗಳನ್ನು ನೋಡಿದರೆ ಇದರ ಹಿನ್ನೆಲೆಯಲ್ಲಿ ಅಂಬರೀಷನಿಗೆ ಕಂಡದ್ದು ಭಗವಂತ, ಜನ್ಮಾಂತರದಲ್ಲಿ ಈ ವ್ಯಕ್ತಿ ಮಾಡಿದ ಕರ್ಮಗಳನ್ನು ನೆನಪಿನಲ್ಲಿಟ್ಟು ಕೊಂಡು ಅವನಿಗೆ ಈ ರೀತಿಯ ದಾರಿದ್ಯವನ್ನು ಕೊಟ್ಟವ ಭಗವಂತ ಎಂದು ನೆನಪಿನಲ್ಲಿಟ್ಟು ಕೊಂಡ, ಸ ವೈ ಮನಃ ಕೃಷ್ಣ ಪದಾರಂವಿದಯೋಃ ಅಲ್ಲಿ ಕಂಡಿದ್ದು ಭಿಕ್ಷುಕನಾದರೂ ಇವನು ಆತನಲ್ಲಿ ಚಿಂತನೆ ಮಾಡಿ ಕಂಡಿದ್ದು ದೇವರನ್ನು ಹಾಗೇ ಸಿರಿ ಬಂದಾಗಲೂ ದೇವ ಚಿಂತನೆ ಮಾಡಿ ಬೇಡಿ ಬಂದವರಿಗೆ ನೀಡುವ ಅವಕಾಶ ಅದು ದೇವರು ನಮಗಿತ್ತ ಭಾಗ್ಯವೆಂದು ತಿಳಿಯಬೇಕು. ಹಾಗೇ ಬೇಡಿ ಬಂದವರಿಗೆ ದಾನ ಮಾಡಿ ಅವರನ್ನೂ ಶ್ರೀಮಂತರನ್ನಾಗಿಸುವ ಯೋಗಿ ಚಕ್ರವರ್ತಿ ಅಂಬರೀಷ.