ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಕಡ್ಡಾಯ ಹಾಜರಾತಿಗೆ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.
ವಿಧಾನನಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ವಿಪ್ ಕೊಟ್ಟಿದ್ದೀವಿ. ಸಂಜೆ 6 ಗಂಟೆಗೆ ಕಡ್ಡಾಯವಾಗಿ ಹಾಜರಾಗಲು ತಿಳಿಸಲಾಗಿದೆ. ಎಲ್ಲಾ ಶಾಸಕರು ರಾತ್ರಿ ಹಿಲ್ಟನ್ ಹೋಟೆಲ್‌ಗೆ ಬರಲಿದ್ದು ಅಲ್ಲೇ ಉಳಿದುಕೊಂಡು ಮಂಗಳವಾರ ಬೆಳಗ್ಗೆ ಎಲ್ಲಾ ಶಾಸಕರು ಹೋಟೆಲ್‌ನಿಂದ ಬಸ್ ವ್ಯವಸ್ಥೆ ಆಗಿದೆ, ಎಲ್ಲರೂ ಒಟ್ಟಿಗೆ ಬಂದು ಮತ ಹಾಕಿ ಹೋಗುತ್ತಾರೆ. ಅಡ್ಡ ಮತದಾನ ಮಾಡಿದವರ ವಿರುದ್ಧ ಸ್ಪೀಕರ್‌ಗೆ ದೂರು ನೀಡಿ ಶಾಸಕ ಸ್ಥಾನದಿಂದ ವಜಾ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.