ನವದೆಹಲಿ: ರಫೇಲ್ ಯುದ್ಧವಿಮಾನಗಳ ಖರೀದಿಸುವ ಸಂಬಂಧ ಭಾರತ ಮತ್ತು ಫಾನ್ಸ್ ನಡುವೆ ಏರ್ಪಟ್ಟ ಒಪ್ಪಂದ ಕುರಿತು ಹೊಸದಾಗಿ ತನಿಖೆ ನಡೆಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ೨೦೧೮ರ ಡಿಸೆಂಬರ್ ೧೪ರಂದು ೩೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬಗೆಗಿನ ಎರಡು ದೇಶಗಳ ನಡುವಣ ಒಪ್ಪಂದವನ್ನೇ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಿರಸ್ಕರಿಸಿನ್ನು ಇಲ್ಲಿ ಸ್ಮರಿಸಬಹುದು.
ದಾಸೌಲ್ಟ್ ಎವಿಯೇಷನ್ ಸಂಸ್ಥೆ ಈ ಸಮರ ವಿಮಾನಗಳ ಮಾರಾಟ ವ್ಯವಹಾರವನ್ನು ತಾನೇ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮಧ್ಯವರ್ತಿಗಳಿಗೆ ಒಂದು ಶತಕೋಟಿ ಯುರೋ ನೀಡಿದೆ ಎಂಬ ಆರೋಪವಿದೆ. ನೀಡಬೇಕೆಂದು ವಕೀಲ ಎಂ.ಎಲ್.ಶರ್ಮಾ ಅವರು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ವಿದೇಶಗಳಲ್ಲಿ ಸಾಕ್ಷ್ಯ ಸಂಗ್ರಹಿಸಲು ಭಾರತೀಯ ತನಿಖಾ ಸಂಸ್ಥೆಗೆ ರೊಗಟರಿ ಲೇಟರ್ ನೀಡಬೇಕೆಂದು ಕೋರಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಉದಯ ಉಮೇಶ್ ಲಲಿತ್ ಹಗೂ ನ್ಯಾ ಮೂ. ಎಸ್.ರವೀಂದ್ರ ಭಟ್ ಅವರ ನ್ಯಾಯಪೀಠ ಪರಿಗಣನೆಗೆ ತೆಗೆದುಕೊಂಡಿತು. ರೊಗಟರಿ ಪತ್ರವೆಂದರೆ ಒಂದು ದೇಶದ ನ್ಯಾಯಾಲಯ ಮತ್ತೊಂದು ದೇಶದ ನ್ಯಾಯಾಲಯಕ್ಕೆ ಕಾನೂನಿನ ನೆರವು ನೀಡುವಂತೆ ಕೋರುವ ಪತ್ರ. ಆದರೆ ಪ್ರಕರಣದ ವಾಸ್ತವಾಂಶ ಹಾಗೂ ಸಂದರ್ಭಗಳನ್ನು ಪರಿಶೀಲಿಸಿಲ್ಲಿ ಸಂವಿಧಾನದ ೩೨ನೇ ವಿಧಿಯಡಿ ಈ ವಿಷಯದ ವಿಚಾರಣೆ ಸುಪ್ರೀಂಕೋರ್ಟಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ವಕೀಲರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾಪಸ್ ಪಡೆಯಲು ನ್ಯಾಯಾಲಯ ಅನುಮತಿ ನೀಡಿದೆ.