ಧಾರವಾಡ: ಜಿ.ಪಂ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ತನಿಖಾಧಿಕಾರಿ ಆಗಿದ್ದ ಚೆನ್ನಕೇಶವ ಟಿಂಗರಿಕರ ಅವರ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಿರೀಕ್ಷಣಾ ಜಾಮೀನಿನ ಮೇಲೆ ಇದ್ದ ಟಿಂಗರೀಕರ ಅವರ ಜಾಮೀನು ಅವಧಿ ಮುಗಿದಿತ್ತು. ಪುನಃ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅವರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ರವಿವಾರ ಬೆಳ್ಳ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಬಂಧನ ಮಾಡಲು ಆಗಮಿಸಿದಾಗ ಮನೆಯ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ.
ಪೊಲೀಸ್ ಇಲಾಖೆ ಸಿಬ್ಬಂದಿಯೇ ಕಳ್ಳರಂತೆ ಎಸ್ಕೇಪ್ ಆಗಿರುವುದು ಹಲವಾರು ಸಂಶಯಕ್ಕೆ ಕಾರಣವಾಗಿದೆ.
![](https://samyuktakarnataka.net/wp-content/uploads/2023/10/IMG-20231008-WA0006.jpg)