ಯುವತಿಯನ್ನು ಕೊಲೆ ಮಾಡಿದ್ದ ಪಾಗಲ್‌ಪ್ರೇಮಿ ಆತ್ಮಹತ್ಯೆ!

ಪಾಗಲ್‌ ಪ್ರೇಮಿ
Advertisement

ದಾವಣಗೆರೆ: ತಾನು ಮದುವೆ ಆಗಬೇಕಿದ್ದ ಯುವತಿಯೊಂದಿಗಿನ ನಿಶ್ಚಿತಾರ್ಥ ಮುರಿದುಬಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಹಾಡಹಗಲೇ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದ ಆರೋಪಿ ತಾನು ಆತ್ಮಹತ್ಯೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೈಯದ್ ಸಾದತ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ವಿನೋಬ ನಗರದ ಯುವತಿ ಚಾಂದ್ ಸುಲ್ತಾನಳೊಂದಿಗೆ ಮದುವೆ ನಿಶ್ಚಯವಾಗಿ ಮುರಿದುಬಿದ್ದಿತ್ತು. ಈಚೆಗೆ ಚಾಂದ್ ಸುಲ್ತಾನಳಿಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಇದನ್ನು ಸಹಿಸದೇ ಸೈಯದ್ ಸಾದತ್ ಗುರುವಾರ ಪಿಜೆ ಬಡಾವಣೆಯ ಚರ್ಚ್‌ರಸ್ತೆಯಲ್ಲಿ ಆಕೆಗೆ ಹತ್ತಾರು ಬಾರಿ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.
ನಂತರ ಮನೆಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ ಸಾದತ್‌ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಶುಕ್ರವಾರ ಬೆಳಿಗ್ಗೆ ಸಾದತ್ ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.