ಮಂಗಳೂರು: ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮುಂದುವರೆಯಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಆರ್ಯ ಸಮಾಜದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಾಲ್ ಕಟ್ ಬಹಿಷ್ಕರಿಸಿ ಜಟ್ಕಾ ಕಟ್ ಸ್ವೀಕರಿಸಿ ಎಂದು ಕಳೆದ ವರ್ಷ ಆರಂಭಿಸಿದ ಅಭಿಯಾನ ಯಶಸ್ವಿಯಾಗಿತ್ತು. ಹಲಾಲ್ ಕಟ್ ನಿಂದಾಗಿ ಟ್ರಸ್ಟ್ ವೊಂದಕ್ಕೆ ಹಣ ಹೋಗುತ್ತಿದ್ದು ಇದು ಭಯೋತ್ಪಾದನೆ , ಗಲಭೆ ಕೃತ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು.
ಹಲಾಲ್ ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದುಗಳು ಕಟ್ ಮಾಡಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅಲ್ಲಾನಿಗೆ ಬಲಿ ಕೊಟ್ಟ ಕುರಿಯ ಮಾಂಸವನ್ನು ತಿನ್ನಬೇಕು ಎಂದು ಪ್ರಶ್ನಿಸಿದ ಅವರು, ಜಮಾತೆ ಉಲೇಮಾ ಹಿಂದ್ ಎನ್ನುವ ಟ್ರಸ್ಟ್ ಹಲಾಲ್ ಹೆಸರಲ್ಲಿ ಜಗತ್ತಿನಲ್ಲಿ ಎರಡು ಲಕ್ಷ ಕೋಟಿ ಆದಾಯ ಮಾಡ್ತಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ ? ಹಲಾಲ್ ನ ದುಡ್ಡು ಟೆರರಿಸ್ಟ್ ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪರವಾಗಿ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ ಐದು ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ನಡೆದ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಗಲಭೆಯ ಹಿಂದೆ ಹಲಾಲ್ ದುಡ್ಡು ಇದೆ. ಹಲಾಲ್ ಮಾಂಸ ಸೇವಿಸಿ ಹಿಂದೂಗಳ ವಿರುದ್ಧವೇ ಷಡ್ಯಂತ್ರ ಮಾಡಲು ನಾವೇ ಕಾರಣವಾಗುತ್ತಿದ್ದೇವೆ. ಹಾಗಾಗಿ ಯುಗಾದಿ ವೇಳೆಗೆ ಹಲಾಲ್ ನಿಷೇಧಿಸಿ, ಹಿಂದುಗಳ ಜಟ್ಕಾ ಕಟ್ ಮಾಂಸ ತಿನ್ನಬೇಕು, ಜೊತೆಗೆ ಹಲಾಲ್ ಮಾರ್ಕನ್ನು ನಿಷೇಧ ಮಾಡಬೇಕು ಎಂದರು.
ಇಂಧನ ಸಚಿವ ಸುನಿಲ್ ಕುಮಾರ್ ಸಂದರ್ಶನವೊಂದರಲ್ಲಿ ರಾಮ ಮಂದಿರ ಕಟ್ಟುವುದು, ಕೇಸರಿ ಶಾಲು ಹಾಕುವುದೇ ಹಿಂದುತ್ವ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸುನಿಲ್ ಕುಮಾರ್ ಈ ಸ್ಥಾನಕ್ಕೇರಲು ಕೇಸರಿ ಶಾಲು, ಹಿಂದುತ್ವ ಕಾರಣ. ಹಿಂದುತ್ವ ಕಾರಣದಿಂದಾಗಿಯೇ ರಾಮ ಮಂದಿರ ಹೋರಾಟ ಆಗಿತ್ತು. ರಾಮ ಮಂದಿರ ಹೋರಾಟ ಹಿಂದುತ್ವದ ಪ್ರತೀಕ, ವಿಜಯದ ಸಂಕೇತ. ಸುನಿಲ್ ಕುಮಾg ಗೆ ಮರೆತು ಹೋಗಿರಬಹುದು. ಇವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ, ಹಿಂದುತ್ವ ಎಂದರೆ ದುಡ್ಡು ಮಾಡುವುದು, ಸೊಕ್ಕು ತೋರಿಸುವುದು ಅಲ್ಲ. ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರುವುದು ಮರೆತು ಹೋಯ್ತಾ ಎಂದು ಪ್ರಶ್ನಿಸಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿರುವ ಸುನಿಲ್ ಕುಮಾರ್ ತನ್ನ ಹೇಳಿಕೆಯನ್ನು ಹಿಂಪಡೆದು, ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅತೀ ಹೆಚ್ಚು ಗೋಕಳ್ಳತನ ನಡೆದಿದೆ. ಹಿಂದೂ ಸಂಘಟನೆಗಳ ೩೦೦ ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ಪ್ರಕರಣಗಳಿದೆ. ಇನ್ನೂ ಪ್ರಕರಣ ಹಿಂದೆತೆಗದುಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ೨೬ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದಾರೆ ಎಂದರು.