10 ದಿನಗಳ ಕಾಲ ನಿರ್ದಿಷ್ಠ ವೇಳೆ ನಿಗದಿ: ಮಾ.27 ರಿಂದ ಏ.5 ವರೆಗೆ ನಿರ್ದಿಷ್ಠ ಸಮಯದಲ್ಲಿ ಸ್ಪರ್ಶಲಿಂಗ ದರ್ಶನಕ್ಕೆ ಅವಕಾಶ
ಹಿಂದು ಸಂಪ್ರದಾಯದ ಮಹತ್ತರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಯುಗಾದಿ ಪ್ರಯುಕ್ತ ಸಾವಿರಾರು ಕಿ.ಮೀ.ನಷ್ಟು ಪಾದಯಾತ್ರೆ, ವಾಹನಗಳಿಂದ ಜಾತ್ರೆಗೆ ತೆರಳುವ ಕರ್ನಾಟಕ ರಾಜ್ಯದ ಲಕ್ಷಾಂತರ ಭಕ್ತರಿಗೆ ಈ ವರ್ಷವೂ ಮಲ್ಲಿಕಾರ್ಜುನ ದೇವಾಲಯದಲ್ಲಿ ಸ್ಪರ್ಶಲಿಂಗ ದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಈ ಕುರಿತು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹಾಗು ಪ್ರಧಾನ ಅರ್ಚಕ ಎಂ. ಶಿವಶಂಕರಯ್ಯ ಮಾತನಾಡಿ ಬರುವ ಏಪ್ರಿಲ್ 9 ರಂದು ಯುಗಾದಿ ಪ್ರಯುಕ್ತ ಯಾವದೇ ಅಡೆತಡೆಗಳಿಲ್ಲದೆ ಸುಗಮವಾಗಿ ಜಾತ್ರೆ ನಡೆಸಲು ಆಡಳಿತ ಮಂಡಳಿ ತಯಾರಿ ಮಾಡುತ್ತಿದೆ. ಆದರೆ ಮಾ.27 ರಿಂದ ಏ.5 ವರೆಗೆ ನಿರ್ದಿಷ್ಠ ಸಮಯದಲ್ಲಿ ಸ್ಪರ್ಶಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಮಾ.6 ರಿಂದ 10 ರವರೆಗೆ ಸಂಪೂರ್ಣವಾಗಿ ನಿಷೇಧಿಸಿ, ಅಲಂಕಾರ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿದರು.
10 ದಿನ ಸ್ಪರ್ಶಲಿಂಗ ದರ್ಶನವಿದೆ: ಭಕ್ತರ ಆಶಯದಂತೆ ಮಾ.27 ರಿಂದ ಏಪ್ರಿಲ್ 5 ರವರೆಗೆ ನಿರ್ದಿಷ್ಠ ಸಮಯದಲ್ಲಿ ಜ್ಯೋತಿರ್ಲಿಂಗ ಸ್ಪರ್ಶಲಿಂಗ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಪ್ರತಿ ದಿನ ಪಾದಯಾತ್ರಿಕರಿಗೆ 2 ಗಂಟೆ, ಇತರೆ ಭಕ್ತರಿಗೆ 2 ಗಂಟೆ ಸೇರಿದಂತೆ ದೇವಸ್ಥಾನದ ಸುಪ್ರಭಾತ, ಆರತಿ, ದೇವಸ್ಥಾನ ಕಾರ್ಯಕ್ರಮ ಹಾಗು ಬ್ರಹ್ಮೋತ್ಸವ ಉತ್ಸವಗಳ ಬಿಡುವಿನ ಸಮಯಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವದೆಂದು ಎಂ. ಶಿವಶಂಕರಯ್ಯ ಸ್ಪಷ್ಟಪಡಿಸಿದರು.
ಸಾವಿರಾರು ಕಿ.ಮೀ.ದಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಎಂದಿನಂತೆ ಮಾರ್ಗ ಮಧ್ಯ ಭಾಗದಲ್ಲಿ ದಾಸೋಹ ಸೇವೆ ಮಾಡುವ ಭಕ್ತರು ಸೇವೆ ಮಾಡಲು ಯಾವುದೇ ಅಡ್ಡಿ ಆತಂಕಗಳಿಲ್ಲ ದೇವಸ್ಥಾನದ ಆವರಣದಲ್ಲಿ ಗದ್ದಲ ಮಾಡದೆ ಶಾಂತತೆ ಕಾಯ್ದುಕೊಳ್ಳಬೇಕೆಂದು ಭಕ್ತರಲ್ಲಿ ಅರ್ಚಕರು ಮನವಿ ಮಾಡಿದ್ದಾರೆ.