ಹಿಂದು ಸಂಪ್ರದಾಯದ ಮಹತ್ತರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಯುಗಾದಿ ಪ್ರಯುಕ್ತ ಸಾವಿರಾರು ಕಿ.ಮೀ.ನಷ್ಟು ಪಾದಯಾತ್ರೆ, ವಾಹನಗಳಿಂದ ಜಾತ್ರೆಗೆ ತೆರಳುವ ಕರ್ನಾಟಕ ರಾಜ್ಯದ ಲಕ್ಷಾಂತರ ಭಕ್ತರಿಗೆ ಈ ವರ್ಷವೂ ಮಲ್ಲಿಕಾರ್ಜುನ ದೇವಾಲಯದಲ್ಲಿ ಸ್ಪರ್ಶಲಿಂಗ ದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಕುರಿತು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪತ್ರಿಕೆಯೊಂದಿಗೆ ಮಾತನಾಡಿ ಬರುವ ದಿ. 22 ರಂದು ಯುಗಾದಿ ಪ್ರಯುಕ್ತ ಯಾವದೇ ಅಡೆತಡೆಗಳಿಲ್ಲದೆ ಸುಗಮವಾಗಿ ಜಾತ್ರೆ ನಡೆಸಲು ಆಡಳಿತ ಮಂಡಳಿ ತಯಾರಿ ಮಾಡುತ್ತಿದೆ. ಆದರೆ ಸ್ಪರ್ಶಲಿಂಗ ದರ್ಶನ ಮಾತ್ರ ಮಾ.19 ರಿಂದ 23ರವರೆಗೆ ಸಂಪೂರ್ಣವಾಗಿ ನಿಷೇಧಿಸಿದೆ ಎಂದು ತಿಳಿಸಿದರು.ಸಾವಿರಾರು ಕಿ.ಮೀ.ದಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಎಂದಿನಂತೆ ಮಾರ್ಗ ಮಧ್ಯ ಭಾಗದಲ್ಲಿ ದಾಸೋಹ ಸೇವೆ ಮಾಡುವ ಭಕ್ತರು ಸೇವೆ ಮಾಡಲು ಯಾವುದೇ ಅಡ್ಡಿ ಆತಂಕಗಳಿಲ್ಲ ದೇವಸ್ಥಾನದ ಆವರಣದಲ್ಲಿ ಗದ್ದಲ ಮಾಡದೆ ಶಾಂತತೆ ಕಾಯ್ದುಕೊಳ್ಳಬೇಕು.