ಯಕ್ಸಂಬಾ-ದಾನವಾಡ ಸೇತುವೆ ಜಲಾವೃತ

ಯಕ್ಸಂಬಾ-ದಾನವಾಡ ಸೇತುವೆ
ದೂಧಗಂಗಾ ನದಿಯ ಯಕ್ಸಂಬಾ-ದಾನವಾಡ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
Advertisement

ಯಕ್ಸಂಬಾ : ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡಲಾಗುತ್ತಿದ್ದು ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನಿರಂತರ ನೀರು ಹರಿದು ಬರುತ್ತಿದೆ. ಶನಿವಾರ ನದಿಗಳ ನೀರಿನ ಮಟ್ಟದಲ್ಲಿ ಸುಮಾರು ಮತ್ತೆ ಒಂದು ಅಡಿಯಷ್ಟು ಏರಿಕೆಯಾಗಿದ್ದರಿಂದ ದೂಧಗಂಗಾ ನದಿಯ ಯಕ್ಸಂಬಾ-ದಾನವಾಡ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಯಕ್ಸಂಬಾ-ದಾನವಾಡ ಸೇತುವೆ ಜಲಾವೃತಗೊಂಡಿದ್ದರಿಂದ ಚಿಕ್ಕೋಡಿ-ನರಶಿಂಹವಾಡಿ ಬಸ್ ಸಂಚಾರ ಹಾಗೂ ಇನ್ನಿತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಅದಲ್ಲದೆ ದೂಧಗಂಗಾ ನದಿಯ ಸದಲಗಾ-ಬೋರಗಾಂವ ಸೇತುವೆ ಮುಳುಗಡೆ ಹಂತ ತಲುಪಿದ್ದು ಈ ಮಾರ್ಗದ ಬಸ್ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿದೆ. ಪಂಚಗಂಗಾ ನದಿಯ ನೀರಿನಿಂದಾಗಿ ಮಾನಕಾಪುರ ಗ್ರಾಮದ ರಸ್ತೆ ಮುಳುಗಡೆಯಾಗಿದ್ದರಿಂದ ಮಾನಕಾಪುರ-ಇಚಲಕರಂಜಿ ಸಂಚಾರ ಸ್ಥಗಿತಗೊಂಡಿದೆ.
ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶನಿವಾರ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ ೧,೪೮,೫೮೩ ಕ್ಯೂಸೆಕ್ ಮತ್ತು ನೆರೆಯ ಮಹಾರಾಷ್ಟçದ ಸುಳಕೂಡ ಮತ್ತು ಚಿಕಲಿ ಬ್ಯಾರೇಜ್‌ದಿಂದ ದೂಧಗಂಗಾ ಮತ್ತು ವೇದಗಂಗಾ ನದಿಗೆ ೩೩,೪೪೦ ಕ್ಯೂಸೆಕ್ ಹೀಗೆ ಒಟ್ಟು ೧,೮೨,೦೨೩ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು ೧೨,೭೩೩ ಕ್ಯೂಸೆಕ್ ನೀರು ಹೆಚ್ಚಿಗೆ ಹರಿದು ಬರುತ್ತಿದೆ.

ಯಕ್ಸಂಬಾ-ದಾನವಾಡ ಸೇತುವೆ
ದೂಧಗಂಗಾ ನದಿಯ ಯಕ್ಸಂಬಾ-ದಾನವಾಡ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.