ಮೋದಿ ಹ್ಯಾಟ್ರಿಕ್ ಗೆಲುವು: ಹುಬ್ಬಳ್ಳಿ ಹೈದನ ಸೈಕಲ್ ಯಾತ್ರೆ ಬಳ್ಳಾರಿ ತಲುಪಿದೆ

Advertisement

ಬಳ್ಳಾರಿ: ಮೋದಿ ಹ್ಯಾಟ್ರಿಕ್ ಗೆಲುವುಗಾಗಿ ಭರತ್ ಸವಣೂರು ನಡೆಸಿರುವ ಕರ್ನಾಟಕದ 28 ಜಿಲ್ಲೆಗಳ ಸೈಕಲ್ ಯಾತ್ರೆ ಬಳ್ಳಾರಿ ತಲುಪಿದೆ.
ಮಾಜಿ ಸಚಿವ ಬಿ. ಶ್ರೀರಾಮುಲು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಭರತ್ ಸವಣೂರು ಎಂಬ ಯುವಕ ಸೈಕಲ್ ಯಾತ್ರೆ ಮೂಲಕ ಕರ್ನಾಟಕದ 28 ಜಿಲ್ಲೆಗಳ ಸೈಕಲ್ ಯಾತ್ರೆ ಮೂಲಕ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವುಗಾಗಿ ಸಂಕಲ್ಪ ಮಾಡಿ, ಸಂಚಾರ ಆರಂಭಿಸಿದ್ದಾರೆ. ಇಂದು ಬಳ್ಳಾರಿ ಮುಖಾಂತರ ಹೋಗುವಾಗ ನನ್ನ ಗೃಹ ಕಛೇರಿಗೆ ಭೇಟಿ ನೀಡಿ, 5 ಜಿಲ್ಲೆಗಳು ಮುಕ್ತಾಯಗೊಂಡಿದ್ದು, ಇನ್ನು 23 ಜಿಲ್ಲೆಗಳು ಉಳಿದಿವೆ ಎಂದು ಮಾಹಿತಿ ನೀಡಿದರು, ಅವರ ಸಂಕಲ್ಪ ಶೀಘ್ರವಾಗಿ ಈಡೇರಲಿ ಎಂದು ಶುಭ ಹಾರೈಸಿದ್ದಾರೆ.