ಬೆಂಗಳೂರು: ಮೈಸೂರು: ಮೋದಿ ಬಗ್ಗೆ ಹಾಡು ಬರೆದಿದ್ದ ಮೈಸೂರು ನಗರದ ಯುವಕನೊಬ್ಬನನ್ನು ಸ್ಥಳೀಯ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೋಂಡು ಪೋಸ್ಟ್ ಮಾಡಿದ್ದು ಮೋದಿ ಬಗ್ಗೆ ಹಾಡು ಬರೆದಾತನನ್ನು ಯುವಕರು ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಅವ್ಯಾಚ ಶಬ್ಧಗಳಿಂದ ಬೈದು, ಪಾಕಿಸ್ತಾನ ಜಿಂದಾಬಾದ್ ಅಂತ ಕೂಗು, ಅಲ್ಲಾಹ್ ಅಕ್ಬರ್ ಅಂತ ಕೂಗು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿಡಿಯೋದಲ್ಲಿ ಮಾತನಾಡಿರುವ ರೋಹಿತ ಎಂಬಾತ ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದ್ದ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರಿನ ಯುವಕ ರೋಹಿತ್ ಎಂಬಾತ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಮೋದಿ ಬಗ್ಗೆ ಸಾಂಗ್ ಬರೆದು ರಿಲೀಸ್ ಮಾಡಿದ್ದೆ. ಯೂಟ್ಯೂಬ್‌ನಲ್ಲಿ ನೋಡಿ, ಸಬ್‌ಸ್ಕ್ರೈಬ್ ಮಾಡಿ ಅಂತ ಪರಿಯಚಸ್ಥರಿಗೆ, ಸ್ನೇಹಿತರಿಗೆಲ್ಲ ಹೇಳಿದ್ದೆ. ಅದೇ ರೀತಿ ಮೈಸೂರಿನ ಗೆಸ್ಟ್ ಹೌಸ್‌ಗೆ ಬಂದಿದ್ದಾಗ ಅಲ್ಲಿದ್ದ ಒಬ್ಬ ಹುಡುಗನ ಹತ್ತಿರವೂ ಮೋದಿ ಸಾಂಗ್ ಬಗ್ಗೆ ಹೇಳಿ, ಮೊಬೈಲ್‌ನಲ್ಲಿ ಸಾಂಗ್ ತೋರಿಸಿದ್ದೆ. ಮೊದಲು ಚೆನ್ನಾಗಿದೆ ಎಂದಿದ್ದ ಆತ, ನನ್ನ ಸ್ನೇಹಿತರ ಹತ್ತಿರ ಹೋಗೋಣ ಬನ್ನಿ ಅಂತ ಆತ ತನ್ನ ಸ್ನೇಹಿತರ ಬಳಿ ಕರೆದುಕೊಂಡು ಹೋದಾಗ ಎಲ್ಲರೂ ಕೆಟ್ಟದಾಗಿ ಬೈಯ್ದು ನನ್ನ ಮೇಲೆ ಹಲ್ಲೆ ಮಾಡಿದ್ರು. ಮೋದಿ ಬಗ್ಗೆ ಹಾಡು ಬರೀತಿಯಾ ಅಂತ ನಿಂದಿಸಿ, ಹೊಡೆದರು ಅಂತ ಹೇಳಿದ್ದಾನೆ.