ಮೋದಿ ಫೋಟೋ ಬಳಕೆಗೆ ಅವಕಾಶ ಸಿಕ್ಕಿದೆ

Advertisement

ಶಿವಮೊಗ್ಗ: ಪ್ರಧಾನಿಯ ಫೋಟೊ ಬಳಕೆಗೆ ನನಗೆ ಅವಕಾಶ ದೊರೆತಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತ್ರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನನ್ನ ಹೃದಯದಲ್ಲಿ ಇದ್ದಾರೆ. ಅವರ ಫೋಟೊ ನಾನು ಬಳಸಬಾರದೆಂದು ಬಿಜೆಪಿ ಕೋರ್ಟ್​​ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈಗ ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಇದರಿಂದ ಬಿಜೆಪಿಯವರಿಗೆ ಎರಡೂ ಕಡೆ ಹಿನ್ನಡೆ ಆಗಿದೆ. ವಿಶ್ವ ನಾಯಕ ನನ್ನ ಜೊತೆ ಉಳಿದ್ದಿದ್ದಾರೆ. ನರೇಂದ್ರ ಮೋದಿ‌ ನನ್ನ ಜೊತೆ ಉಳಿದರೆ ಅದೇ ನನಗೆ ಆನಂದ, ನನಗೆ ಸಂತೋಷವಾಗಿದೆ, ಯಾವುದೇ ಪಕ್ಷ ಅಥವಾ ವ್ಯಕ್ತಿ ನನ್ನನ್ನು ಮೋದಿಯವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಆದರ್ಶ ನನಗೆ ಮಾದರಿ. ಚುನಾವಣೆ ಗೆಲ್ಲಲು ಮೋದಿ ಫೋಟೋ ಅನುಕೂಲ ಆಗಲಿದೆ, ನರೇಂದ್ರ ಮೋದಿಯವರ ವಿಚಾರಧಾರೆಯನ್ನು ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.