ಬೆಳಗಾವಿ: ಏ.28 ರಂದು ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನರೇಂದ್ರ ಮೊದಿಯವರ ನೇತೃತ್ವದಲ್ಲಿ ನಡೆಯುವ ಬೃಹತ್ ಸಮಾವೇಶದ ಸಿದ್ಧತೆಯನ್ನು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಜನ ನಾಯಕರು ಪರಿಶೀಲನೆ ನಡೆಸಿದರು.
ಏ.28 ರಂದು ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಆಗಮಿಸುತ್ತೀರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಸಕಲ ಸಿದ್ಧತೆಯನ್ನು ಮಾಲಿನಿ ಸಿಟಿ ಮೈದಾನದಲ್ಲಿ
ಸಂಸದೆ ಮಂಗಳ ಅಂಗಡಿ, ಶಾಸಕ ರಮೇಶ ಜಾರಕಿಹೊಳಿ, ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ, ಬೆಳಗಾವಿ ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಎಂಬಿ ಜಿರಳಿ, ರಮೇಶ ದೇಶಪಾಂಡೆ, ಮರಗೇಂದ್ರಗೌಡಾ ಪಾಟೀಲ್, ಎಫ್ ಎಸ್ ಸಿದ್ದನಗೌಡ, ಹನಂತ ಕೊಂಗಾಲಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಏ.28 ರಂದು ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ಬೆಳಗ್ಗೆ 9 ಗಂಟೆ ಬೃಹತ್ ಸಮಾವೇಶ ಇರಲ್ಲಿದೆ. ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಸೇರಿ 18 ವಿಧಾನಸಭಾದ ಶಾಸಕರು ಮಾಜಿ ಸಚಿವರು ಕಾರ್ಯಕರ್ತರು , ಬಿ.ಎಸ್ ಯಡಿಯೂರಪ್ಪ. ದೇವೇಗೌಡರು, ವಿಜಿಯೇಂದ್ರ, ಕುಮಾರಸ್ವಾಮಿಯವರು ಎಲ್ಲರೂ ಬರುತ್ತಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಮೋದಿಯವರ ಸಮಾವೇಶ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುತ್ತಿದೆ ಎಂದು ಹೇಳಿದ್ದರು.
ಭಾರತದ ವೈವಿಧ್ಯಮಯ ದೇಶವಾಗಿದೆ ಅದರಲ್ಲೂ ಬೆಳಗಾವಿಯಲ್ಲಿ ಕನ್ನಡ ಮರಾಠಿ ಜನರು ಸಹೋದರಂತೆ ಇದ್ದಾರೆ, ಇದು ರಾಷ್ಟ್ರೀಯ ಚುನಾವಣೆ ಆಗಿರುವುದರಿಂದ ಎಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಾರೆ, ಕಾಂಗ್ರೆಸ್ ನವರು ಇದನ್ನು ಸಾಮಾನ್ಯ ಪಂಚಾಯಿತಿ ಚುನಾವಣೆ ಅಂದುಕೊಂಡಿದ್ದಾರೆ ಎಂದರು.
ದೇಶದ ಅಭಿವೃದ್ಧಿ, ದೇಶದ ಭದ್ರತೆಯನ್ನು ನೋಡಿಕೊಂಡರು ಮತ ನೀಡಬೇಕು. ಲೋಕಸಭಾ ಚುನಾವಣೆ ಎಂದರೆ ಇಡೀ ದೇಶದ ಭವಿಷ್ಯ ರೂಪಿಸುವ ಚುನಾವಣೆ ಆಗಿದೆ. ನರೇಂದ್ರ ಮೋದಿಯವರು ತಮ್ಮ ಆಡಳಿತ 10 ವರ್ಷದಲ್ಲಿ ಉತ್ತಮ ಸರ್ಕಾರ ನಡೆಸಿದ್ದಾರೆ. ಕಳೆದ 10 ವರ್ಷದಲ್ಲಿ ಅಭಿವೃದ್ಧಿಯಲ್ಲಿ 14 ನೇ ಸ್ಥಾನದಲ್ಲಿ ಇದ್ದ ಭಾರತ 5 ಸ್ಥಾನಕ್ಕೆ ಬಂದಿದೆ. ಎಂದರು.
ನೇಹಾ ಹಿರೇಮಠ ವಿಚಾರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟಿಕರಣ ನೀತಿ ಅನುಸರಿಸುತ್ತೀದೆ ನೇಹಾಳ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ತನಿಖೆ ನಡೆವಾಗಲೇ ಸಿಎಂ, ಗೃಹ ಸಚಿವರು ವೈಯಕ್ತಿಕ ಘಟನೆ ಅಂತ ಹೇಳಿಕೆ ಕೊಟ್ಟಿದ್ದರು, ಸಿಎಂ ನಿನ್ನೆ ಬಂದು ಸ್ವಾಂತನ ಹೇಳಿದ್ದರು ಒಂದು ವಾರ ಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.