ಯಕ್ಸಂಬಾ: ಸಮೀಪದ ಸೈನಿಕ ಮಲಿಕವಾಡ ಗ್ರಾಮದ ಹತ್ತಿರದ ದೂಧಗಂಗಾ ನದಿಯ ಬಳಿ 7 ಅಡಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, ನದಿ ತೀರದ ರೈತರಲ್ಲಿ ಅತಂಕ ಮೂಡಿಸಿದೆ.
ಕಳೆದ ತಿಂಗಳು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳಿಗೆ ಪ್ರವಾಹ ಬಂದಿದ್ದು, ನಂತರ ದಿನಗಳಲ್ಲಿ ಈ ಪರಿಸರದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ ಎಂದು ರೈತರು ತಿಳಿಸಿದ್ದಾರೆ.
ಸಾಮಾನ್ಯವಾಗಿ ನದಿ ತೀರದ ಗ್ರಾಮದ ಜನತೆಯು ನದಿಯಲ್ಲಿ ಬಟ್ಟೆ ತೊಳೆಯಲು, ಚಿಕ್ಕಮಕ್ಕಳು ಸ್ನಾನಕ್ಕೆ, ದನಕರುಗಳಿಗೆ ನೀರು ಕುಡಿಸಲು ಹಾಗೂ ನದಿಯ ದಂಡೆಯ ಮೇಲಿರುವ ಮೋಟಾರ ಪಂಪಸೆಟ್ ಪ್ರಾರಂಭಿಸಲು ಹೋಗುವುದು ಸರ್ವೇ ಸಾಮಾನ್ಯ. ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಮೂಡಿಸಿದೆ.